Sat. Aug 16th, 2025

ಬೆಳ್ತಂಗಡಿ: 200 ಮೀಟರ್ ಉದ್ದದ ಧ್ವಜ ಪ್ರದರ್ಶಿಸಿ ಬೆಳ್ತಂಗಡಿ ತಾಲೂಕಿನಲ್ಲೇ ದಾಖಲೆ ಬರೆದ ಗೇರುಕಟ್ಟೆ ಮನ್ ಶರ್ ಕಾಲೇಜ್ ವಿದ್ಯಾರ್ಥಿಗಳು

ಬೆಳ್ತಂಗಡಿ: 79 ನೇ ಭಾರತ ಸ್ವಾತಂತ್ರ್ಯೋತ್ಸವ ಅಂಗವಾಗಿ ಗೇರುಕಟ್ಟೆ ಮನ್ಶರ್ ಅಕಾಡೆಮಿಯಲ್ಲಿನ ಮನ್ಶರ್ ಪ್ಯಾರಾ ಮೆಡಿಕಲ್ ಕಾಲೇಜು, ಪಿಯು ಕಾಲೇಜು, ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿಗಳಿಂದ ಸುಮಾರು 200 ಮೀಟರ್ ಉದ್ದದ ಭಾರತ ಧ್ವಜವನ್ನು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಪ್ರದರ್ಶಿಸಿ ದಾಖಲೆ ಬರೆದರು.

ಇದನ್ನೂ ಓದಿ: 🔴ಕನ್ಯಾಡಿ: ಕನ್ಯಾಡಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಬಹಳ ವಿಜೃಂಭಣೆಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಸಯ್ಯಿದ್ ಉಮರ್ ಅಸ್ಸಖಾಫ್ ತಂಙಳ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾರತ ನಮ್ಮ ಹೆಮ್ಮೆಯ ರಾಷ್ಟ್ರ , ದೇಶದ ಕಾನೂನುಗಳನ್ನು ಪಾಲಿಸಬೇಕು. ವಿದ್ಯಾರ್ಥಿ ಜೀವನದಿಂದಲೇ ನೀವೆಲ್ಲಾ ದೇಶಪ್ರೇಮವನ್ನು ರೂಪಿಸಿಕೊಳ್ಳಬೇಕೆಂಬುದಾಗಿ ಕರೆ ನೀಡಿದರು.


ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ಸ್ವಾಗತಿಸಿದರು. ಸಂಸ್ಥೆಯ ಟ್ರಸ್ಟಿ ಅಬ್ದುಲ್ ಖಾದರ್ ಹಾಜಿ, ಬೆಳ್ತಂಗಡಿ ಅಗ್ನಿಶಾಮಕ ದಳದ ಅಧಿಕಾರಿ ಉಸ್ಮಾನ್ , ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ, ಅರೇಬಿಕ್ ವಿಭಾಗದ ಮುಖ್ಯಸ್ಥ ಅಬ್ದುಲ್ಲ ಸಖಾಫಿ ನಿಂತಿಕಲ್ಲು, ಪಿ.ಯು ಕಾಲೇಜಿನ ಪ್ರಾಂಶುಪಾಲ ಹಂಸ, ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಜಿನಾತ್ ಬಾನು, ಮುಖ್ಯೋಪಾಧ್ಯಾಯಿನಿ ಉಷಾ ಪಿ, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಗೌತಮಿ ಶರಣ್, ಪಿ. ಯು ವಿಭಾಗದ ಉಪ ಪ್ರಾಂಶುಪಾಲ ಮೊಹಮ್ಮದ್ ತೌಫೀಕ್,


ವಿದ್ಯಾರ್ಥಿಗಳ ಪೋಷಕರು, ಸ್ಥಳೀಯ ಜಮಾತಿನ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಯುವ ನಾಯಕರು ಮನ್ಶರ್ ಸಂಸ್ಥೆಗಳ ಶಿಕ್ಷಕರು ಮತ್ತು ಶಿಕ್ಷಕೇತರ ವೃಂದದವರು , ವಿದ್ಯಾರ್ಥಿಗಳು, ಮತ್ತು ಮನ್ಶರ್ ಹಿತೈಷಿಗಳು ಭಾಗಿಯಾಗಿದ್ದರು.
ಧ್ವಜ ಪ್ರದರ್ಶನದ ಜೊತೆಗೆ ವಿದ್ಯಾರ್ಥಿಗಳಿಂದ ನಿರ್ಮಿಸಿದ ಗೇಟ್ ವೇ ಆಫ್ ಇಂಡಿಯಾದ ಮಾದರಿ ಮನಮೋಹಕವಾಗಿತ್ತು. ವಿದ್ಯಾರ್ಥಿ ಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ನಡೆಯಿತು. ಶಿಕ್ಷಕಿ ನಿಶಾ ಕಾರ್ಯಕ್ರಮವನ್ನು ನಿರೂಪಿಸಿದರು. ರಶೀದ್ ಕುಪ್ಪಟ್ಟಿ ವಂದಿಸಿದರು.

Leave a Reply

Your email address will not be published. Required fields are marked *