ಉಜಿರೆ: ಶ್ರೀ ಸಂತಾನ ಗೋಪಾಲಕೃಷ್ಣ ಬಾಲಗೋಕುಲ ಚಾವಡಿ ಮುಂಡತ್ತೋಡಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಶಾಕಾರ್ಯಕರ್ತೆ ಶ್ರೀಮತಿ ಶಾರದಾ ಮತ್ತು ಶ್ರೀಮತಿ ಲೀಲಾವತಿಯವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಪುಟ್ಟ ಮಕ್ಕಳು ರಾಧೆ ಹಾಗೂ ಕೃಷ್ಣನ ವೇಷ ಧರಿಸಿದ್ದರು. ಮಕ್ಕಳಿಗೆ ಭಕ್ತಿಗೀತೆ ಹಾಗೂ ಕಥಾಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಮುಖವಾಗಿ ಸಂತಾನ ಗೋಪಾಲಕೃಷ್ಣ ಬಾಲಗೋಕುಲದ ಪಾಲಕರಾದ ಸುಮೇದ ಭಟ್ ಚಾವಡಿಮನೆ ಇವರು ಉಪಸ್ಥಿತರಿದ್ದು, ಆಶೀರ್ವಾದಿಸಿದರು.
ಮಕ್ಕಳ ಪೋಷಕರು ಹಾಗೂ ಊರ ನಾಗರಿಕರು ಭಾಗವಹಿಸಿದ್ದರು. ಬಾಲಗೋಕುಲದ ಮಾತಾಜಿಯವರಾದ ಶ್ರೀಮತಿ ಪವಿತ್ರ ಹಾಗೂ ಶ್ರೀಮತಿ ರಕ್ಷಿತಾರವರು ಉಪಸ್ಥಿತರಿದ್ದು, ಸಹಕರಿಸಿದರು.



