ಬೆಳಾಲು : ಮೈತ್ರಿ ಯುವಕ ಮಂಡಲ (ರಿ.)ಬೆಳಾಲು ಇದರ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ, ಕೃಷ್ಣವೇಷ, ಆಟೋಟ ಸ್ಪರ್ಧೆಯ ಸಮಾರೋಪ ಸಮಾರಂಭ ಆಗಸ್ಟ್ 17 ರಂದು ಸಂಘದ ವಠಾರದಲ್ಲಿ ನೆರವೇರಿತು.

ಇದನ್ನೂ ಓದಿ: 🟣ಮಂಗಳೂರು: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಉಪನ್ಯಾಸಕರಾದ ಡಾ. ಶೀಲಾವತಿಯವರು ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಬೌತಿಸ್ ಡಿ’ಸೋಜ ಬೆಳಾಲು, ಬೆಳಾಲು ಹಾಲು ಉತ್ಪಾದಕರ ಸಂಘ ಕಾರ್ಯದರ್ಶಿ ಸುಕೇಶ್ ಭಾಗವಹಿಸಿದ್ದರು, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಾಂತೇಶ್ ಚೌಹಾನ್, ಜೇಸ್ಸಿ ಡಿ’ಸೋಜ, ಪದ್ಮಾವತಿ ಬನoದೂರು, ಕು. ಮನಶ್ರೀ ಇವರುಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ಮೈತ್ರಿ ಯುವಕ ಮಂಡಲ ಅಧ್ಯಕ್ಷರಾದ ನಿತಿನ್ ಮೋನಿಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷರಾದ ರಾಜೇಶ್ ಪಾರಳ, ಕಾರ್ಯದರ್ಶಿ ವಿಘ್ನೇಶ್ ಅನಂತೋಡಿ, ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜೇಶ್ ಪಾರಳ ಸ್ವಾಗತಿಸಿ, ಸಂಘದ ಸಲಹೆಗಾರರು ನೋಟರಿ ವಕೀಲರಾದ ಶ್ರೀನಿವಾಸ ಗೌಡ ಕಾರ್ಯಕ್ರಮ ನಿರೂಪಿಸಿ,ಸಾತ್ವಿಕ್ ಸನ್ಮಾನ ಪತ್ರ ವಾಚಿಸಿದರು, ಕಿರಣ್ ಈರೆoತ್ಯಾರ್ ಬಹುಮಾನ ವಿಜೇತ ಪಟ್ಟಿ ವಾಚಿಸಿದರು, ಅಸೀಫ್ ಮುಂಡೆತ್ಯಾರು ಧನ್ಯವಾದವಿತ್ತರು. ಗ್ರಾಮಸ್ಥರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಯಿತು.



