Mon. Aug 18th, 2025

ಮಂಗಳೂರು: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಪಚ್ಚನಾಡಿಯ ಸ್ನೇಹ ದೀಪ ಆಶ್ರಮದ ವಿಶೇಷ ಮಕ್ಕಳಿಗೆ ಒಂದು ತಿಂಗಳ ಆಹಾರ ಧಾನ್ಯಗಳನ್ನು ವಿತರಿಸುವ ಮೂಲಕ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.

ಇದನ್ನೂ ಓದಿ: 🟣ವೇಣೂರು: ಕುಂಭಶ್ರೀ ಶಾಲಾ- ಕಾಲೇಜು ನಿಟ್ಟಡೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಧ್ವಜಾರೋಹಣ ಗೈದ ಒಕ್ಕೂಟದ ಅಧ್ಯಕ್ಷ ಎಸ್.ಎನ್.ನೌಫಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್, ಕರಾವಳಿ ಬ್ಯಾರಿ ಕಲಾವಿದರ ಒಕ್ಕೂಟದ ಅಧ್ಯಕ್ಷ ಸಾಹಿತಿ ಹುಸೈನ್ ಕಾಟಿಪಳ್ಳ, ಅಖಿಲ ಭಾರತ ಬ್ಯಾರಿ ಪರಿಷತ್ತಿನ ಗೌರವ ಸಲಹೆಗಾರ ಡಾಕ್ಟರ್ ಸಿದ್ದೀಕ್, ಹಿರಿಯ ಕಲಾವಿದ ರಹೀಂ ಬಿ.ಸಿ.ರೋಡ್, ಸ್ನೇಹ ದೀಪ ಆಶ್ರಮದ ಸಂಸ್ಥಾಪಕಿ ತಬಸ್ಸುಂ, ಮಾಜಿ ಉಪಾಧ್ಯಕ್ಷ ಇರ್ಫಾನ್ ಕುಂದಾಪುರ ಮುಂತಾದವರು ಭಾಗವಹಿಸಿದ್ದರು.


ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಝ್ ಕಲಾಯಿ ಕಾರ್ಯಕ್ರಮ ಸಂಯೋಜಿಸಿದ್ದರು. ಮಾಜಿ ಪ್ರಧಾನ ಕಾರ್ಯದರ್ಶಿ ಸರ್ಫ್ರಾಝ್ ಮಂಗಳೂರು ಸ್ವಾಗತಿಸಿದರು. ಸ್ಥಾಪಕಾಧ್ಯಕ್ಷ ಸಮೀರ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿದರು.
ಹಾಗೂ ಮರ್ಹೂಂ ಶಪುವಾನ್ ಕೊಲ್ನಾಡ್ ಅವರ ಮನೆಯವರಿಗೆ ಕಮಿಟಿಯ ಸದಸ್ಯರಾದ ಮುಹಝ್ಝಿನ್ ಬೆಲಪು ಅವರು ಸಹಾಯಧನವನ್ನು ಅವರ ಕೈಗೆ ಹಸ್ತಾಂತರಿಸಲಾಯಿತು.

Leave a Reply

Your email address will not be published. Required fields are marked *