ಬೆಳ್ತಂಗಡಿ: ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ವತಿಯಿಂದ ಬೆಳ್ತಂಗಡಿಯ ತಾಲೂಕಿನ ಶಾಸಕರಾದ ಹರೀಶ್ ಪೂಂಜ ಇವರ ಹುಟ್ಟು ಹಬ್ಬವನ್ನು ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಇದನ್ನೂ ಓದಿ: ⭕ಪುತ್ತೂರು: ನೇಣುಬಿಗಿದುಕೊಂಡು ಯುವತಿ ಆತ್ಮಹತ್ಯೆ
ಈ ಸಂದರ್ಭದಲ್ಲಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಡಾ. ಶಶಾಂಕ್ , ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಕರ್ನಾಟಕ ಇದರ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ, ರಾಜ ಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ತಾಲೂಕು ಇದರ ಅಧ್ಯಕ್ಷರಾದ ಸತೀಶ್ ಕಂಗಿತ್ತಿಲ್, ನಿಕಟ ಪೂರ್ವ ಅಧ್ಯಕ್ಷರಾದ ಸಂದೀಪ್ ಬೆಳ್ತಂಗಡಿ, ಟ್ರಸ್ಟಿನ ಪದಾಧಿಕಾರಿಗಳಾದ ಶರತ್ ಕರಾಯ, ಕಿಶನ್, ಸಂಪತ್, ಗಣೇಶ್, ಸಂದೇಶ್, ಪ್ರವೀಣ್ ಆಚಾರ್ಯ ಇವರೆಲ್ಲ ಉಪಸ್ಥಿತರಿದ್ದರು.



