Mon. Aug 18th, 2025

ಬೆಳ್ತಂಗಡಿ: ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಗೆ ಕೊಡುಗೆಗಳು ಹಸ್ತಾಂತರ

ಬೆಳ್ತಂಗಡಿ: ಪೆರ್ಲ ಬೈಪಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಭಾರತದ 79ನೇ ಸ್ವಾತಂತ್ರ್ಯೋತ್ಸವ ಆಚರಣೆ ಜರುಗಿತು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಕೊಡುಗೆಯಾಗಿ ನೀಡಿದಂತಹ ನೂತನ ಧ್ವಜಸ್ತಂಭ, ಇಂಟರ್ ಲಾಕ್ ವ್ಯವಸ್ಥೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ: 🟠ಬೆಳಾಲು : ಮೈತ್ರಿ ಯುವಕ ಮಂಡಲ (ರಿ.)ಬೆಳಾಲು ಇದರ ವತಿಯಿಂದ 21 ನೇ ವರ್ಷದ ಮೊಸರು ಕುಡಿಕೆ ಉತ್ಸವ

ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕೇಶವ ಗೌಡ ಮತ್ತು ಪದಾಧಿಕಾರಿಗಳಾದ ದಿನೇಶ್ ಅಡ್ಡಾರು, ಲಕ್ಷ್ಮಿಕಾಂತ್ ಕೀಲಾರು, ಹರೀಶ್ ಕೋಡಿಮಜಲು, ನವೀನ್ ಪ್ರಕಾಶ್, ತಿರುಮಲೇಶ್ ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ಕೆ ಸ್ವಾಗತಿಸಿ , ಹಳೆ ವಿದ್ಯಾರ್ಥಿ ಸಂಘಕ್ಕೆ ಶಾಲೆಯ ಪರವಾಗಿ ಕೃತಜ್ಞತೆಗಳನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮಹಾಬಲ ಗೌಡ, ಸದಸ್ಯರಾದ ಶ್ರೀನಿವಾಸ ಗೌಡ, ಕವಿತಾ, ಶ್ಯಾಮಲಾ, ಶಶಿಧರ ಗೌಡ ಹಾಗೂ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *