ವೇಣೂರು : ಕುಂಭಶ್ರೀ ಶಾಲಾ- ಕಾಲೇಜು ನಿಟ್ಟಡೆ ವೇಣೂರು ಇಲ್ಲಿನ 79 ನೇ ಸ್ವಾತಂತ್ರ್ಯ ದಿನಾಚರಣಾ ಕಾರ್ಯಕ್ರಮವು ಧ್ವಜಾರೋಹಣದಿಂದ ಪ್ರಾರಂಭಗೊಂಡು, ಶ್ರೀ ಭರತ್ ಯು. ಜಿ ಅರಣ್ಯಾಧಿಕಾರಿ ವೇಣೂರು ಹಾಗೂ ಶಾಲಾ ಸಂಸ್ಥಾಪಕರಾದ ಗಿರೀಶ್ ಕೆ ಹೆಚ್, ಕುಂಭಶ್ರೀ ವೈಭವ ಸಮಿತಿಯ ಅಧ್ಯಕ್ಷ ರಾದ ಹರೀಶ್ ಪೊಕ್ಕಿ, ಕಾಲೇಜಿನ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗೋಪಾಲ ಶೆಟ್ಟಿ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಇವರು ಧ್ವಜಾರೋಹಣ ನೆರವೇರಿಸಿದರು.

ಇದನ್ನೂ ಓದಿ: 🟢ಗುರುವಾಯನಕೆರೆ: ಶ್ರೀ ವೇದವ್ಯಾಸ ಶಿಶುಮಂದಿರದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ
ಮುಖ್ಯ ಅತಿಥಿಯಾದ ಶ್ರೀಯುತ ತಿಮ್ಮಪ್ಪ ಮೂಲ್ಯ ಮಾಜಿ ಸೈನಿಕರು ಮಂಗಳೂರು ಇವರು ಈ ಶಾಲೆಯು ಸಂಸ್ಕಾರಕ್ಕೆ ಮಾದರಿಯಾಗಿದೆ,ಇನ್ನು
ಮುಂದಕ್ಕೂ ಇದೇ ರೀತಿ ಮುಂದುವರಿಯಲಿ ಎಂದು ಹೇಳಿದರು.ಅದೇ ರೀತಿ ವೇಣೂರಿನ ಅರಣ್ಯಾಧಿಕಾರಿ ಭರತ್ ಯುಜಿ ಇವರು ಒಳ್ಳೆಯ
ವಿದ್ಯಾಭ್ಯಾಸವನ್ನು ಪಡೆದು ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಮಕ್ಕಳಿಗೆ ಕಿವಿಮಾತು ನೀಡಿದರು.

ಹಾಗೆಯೇ ಹರೀಶ್ ಪೊಕ್ಕಿ ಇವರು ಈ ವಿದ್ಯಾಸಂಸ್ಥೆಯು ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಲಿ ಎಂದು ಶುಭ ಹಾರೈಸಿದರು. ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗೋಪಾಲ ಶೆಟ್ಟಿ ಇವರು ಮನುಷ್ಯನ ಜೀವನದಲ್ಲಿ ಶಿಸ್ತು ಅತ್ಯಗತ್ಯ .ಈ ಶಾಲೆಯು ಶಿಸ್ತಿಗೆ ಎತ್ತಿದ ಕೈ ಎಂದರು.


ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಶ್ರೀ ವಸಂತ್ ಪಡೀಲ್ , ಪೋಷಕರು , ಕಾಲೇಜಿನ ಪ್ರಾಂಶುಪಾಲರಾದ ಓಮನ ಎಂ ಎ , ಎಲ್ಲಾ ಮುಖ್ಯೋಪಾಧ್ಯಾಯನಿಯರು , ಶಿಕ್ಷಕ ವೃಂದದವರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಕಾಲೇಜಿನ ಉಪನ್ಯಾಸಕ ಶ್ರೀ ಅಭಿಲಾಷ್ ಮತ್ತು ಪ್ರೌಢಶಾಲಾ ವಿಭಾಗದ ವಿಭಾಗದ ಶಿಕ್ಷಕಿ ಶ್ರೀಮತಿ ಅಕ್ಷತಾ ನಿರೂಪಿಸಿ , ರಷ್ಯಾದಲ್ಲಿ ಎಂ ಬಿ ಬಿ ಎಸ್ ವ್ಯಾಸಾಂಗ ಮಾಡುತ್ತಿರುವ, ನಮ್ಮ ಶಾಲಾ ಹಿರಿಯ ವಿದ್ಯಾರ್ಥಿಯಾದ ಶ್ರೀ ಪೂಜಿತ್ ಕುಲಾಲ್ ಇವರು ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶ್ರೀಮತಿ ಮಮತಾ ಶಾಂತಿ ವಂದಿಸಿ,ಎಲ್ಲಾ ವಿದ್ಯಾರ್ಥಿ ಗಳಿಗೆ ಸಿಹಿ ತಿಂಡಿಯನ್ನು ವಿತರಿಸಲಾಯಿತು.
