Tue. Aug 19th, 2025

ಕಲ್ಲಡ್ಕ : ಕಲ್ಲಡ್ಕ ನೇತಾಜಿ ಸ್ಮೃತಿ ಭವನದಲ್ಲಿ ಜನಾಗ್ರಹ ಸಭೆ ಯ ಪೂರ್ವಭಾವಿ ಸಭೆ

ಕಲ್ಲಡ್ಕ : ಶ್ರೀ ಧರ್ಮಸ್ಥಳ ಧರ್ಮ ರಕ್ಷಣಾ ವೇದಿಕೆ ಬಂಟ್ವಾಳ ವತಿಯಿಂದ ಆಗಸ್ಟ್ 20 ರಂದು ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಜರಗುವ ಜನಾಗೃಹ ಸಭೆಯ ಯಶಸ್ವಿಗೆ ಕಲ್ಲಡ್ಕ ನೇತಾಜಿ ಸ್ಮೃತಿ ಭವನದಲ್ಲಿ ಪೂರ್ವಭಾವಿ ಸಭೆ ಸೋಮವಾರ ಜರಗಿತು.

ಇದನ್ನೂ ಓದಿ: 🟠ಉಜಿರೆ : ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

ಧರ್ಮಸ್ಥಳ ಕ್ಷೇತ್ರದ ಕುರಿತು ಮಾಡುವ ಅಪಪ್ರಚಾರ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ತೇಜೋವದೇಯ ವಿರುದ್ಧ ಪ್ರತಿಭಟಿಸಲು ಆಯೋಜಿತ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿವಿಧ ಸಂಘಟನೆಯ ಮುಖಂಡರು ಮನವಿ ಮಾಡಿದರು.

ಮಾಜಿ ಶಾಸಕರುಗಳಾದ ರುಕ್ಮಯ ಪೂಜಾರಿ,, ಪದ್ಮನಾಭ ಕೊಟ್ಟಾರಿ, ವಿಟ್ಲ ತಾಲೂಕು ಬಜನಾ ಪರಿಷತ್ ಕೋಶಾಧಿಕಾರಿ ಜಯರಾಮ ರೈ,ಕಲ್ಲಡ್ಕ ಶಾರದಾ ಪ್ರತಿಷ್ಠಾನದ ಕಾರ್ಯದರ್ಶಿ ವಜ್ರನಾಥ್ ಕಲ್ಲಡ್ಕ, ಶಾರದಾ ಪೂಜಾ ಉತ್ಸವ ಸಮಿತಿಯ ಅಧ್ಯಕ್ಷ ಯೋಗೇಶ್ ಕಲ್ಲಡ್ಕ, ಜಾನ್ಸಿ ರಾಣಿ ಮಹಿಳಾ ಮಂಡಳಿ ಅಧ್ಯಕ್ಷ ಮೀನಾಕ್ಷಿ ಆರ್ ಪೂಜಾರಿ, ನೇತಾಜಿ ಯುವಕಮಂಡಲದ ಗೌರವ ಅಧ್ಯಕ್ಷ ನಾಗೇಶ್ ಕೆ,ಸುರಕ್ಷಾ ಸಂಗಮ ಪುರ್ಲಿಪಾಡಿ ನಿಕಟ ಪೂರ್ವ ಅಧ್ಯಕ್ಷ ವೆಂಕಟರಾಯ ಪ್ರಭು, ಮಹಾ ಗಣೇಶ್ ಗೆಳೆಯರ ಬಳಗದ ಅಧ್ಯಕ್ಷ ಬಾಲಕೃಷ್ಣ, ಓಂ ಶಕ್ತಿ ಕಲ್ಲಡ್ಕ ಗೌರವಅಧ್ಯಕ್ಷ ರತ್ನಾಕರ ಶೆಟ್ಟಿ, ಯತಿನ್ ಕುಮಾರ್, ಪಂಚಾಯತ್ ಸದಸ್ಯರಾದ ರಾಜೇಶ್ ಕೊಟ್ಟಾರಿ, ಈಶ್ವರ ಭಟ್ ಮೊದಲಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಲಖಿತ ಆರ್ ಶೆಟ್ಟಿ ಮತ್ತು ಲೀಲಾವತಿ. ಸಂಜೀವ ಪೂಜಾರಿ, ಲೋಕಾನಂದ ಏಳ್ತಿ ಮಾರ್, ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *