ಉಜಿರೆ : (ಆ.19) “ಸಮ್ಯಕ್ ಭಾಷಾ ಸಂಸ್ಕೃತ ಭಾಷಾ, ಎಲ್ಲಾ ಭಾಷೆಗಳೂ ಸಂಸ್ಕೃತಮಯವಾಗಿದೆ. ಸಂಸ್ಕೃತ ಇರದ ಕ್ಷೇತ್ರವಿಲ್ಲ” ಎಂದು ಎಸ್.ಡಿ.ಎಮ್ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಪ್ರಸನ್ನ ಕುಮಾರ್ ಐತಾಳ್ ಇವರು ಹೇಳಿದರು.

ಇವರು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ,(ಸಿ.ಬಿ.ಎಸ್.ಇ) ಉಜಿರೆ ಇಲ್ಲಿ ‘ಆತ್ಮಾನಂ ಸಂಸ್ಕೃತಂ ಮನ್ಯೆ’ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿದ್ದ ‘ಸಂಸ್ಕೃತೋತ್ಸವ’ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿ ಮಾತನಾಡಿದರು.
ಸಂಸ್ಕೃತ ಜಯ ಘೋಷಣೆಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಮೂಹ ಗಾಯನ ಹಾಗೂ ವಿಶ್ವ ಸಂಸ್ಕೃತ ದಿನದ ಮಹತ್ವದ ಕುರಿತು ಭಾಷಣ ಆಯೋಜಿಸಲಾಗಿತ್ತು.


ಶಾಲಾ ಪ್ರಾಂಶುಪಾಲರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿದ್ಯಾರ್ಥಿನಿಯರಾದ ಶಶಾಂಕ್ ಮತ್ತು ಸಹನ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಸುಜನಾ ವಾಲ್ತಾಜೆ ಸ್ವಾಗತಿಸಿ, ವಿದ್ಯಾರ್ಥಿ ಕ್ರಿಸ್ಟಿ ವಂದಿಸಿದರು.

