ಬೆಳಾಲು: ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯಲ್ಲಿ ಉಷಾ ಏನ್ ಉಡುಪ ಹೆಸರಿನ ಶಾಶ್ವತ ದತ್ತಿ ನಿಧಿ ವಿತರಣಾ ಕಾರ್ಯಕ್ರಮ ಆಗಸ್ಟ್ 19 ರಂದು ಜರಗಿತು.

ಕಾರ್ಯಕ್ರಮವನ್ನು ಊರ ಪ್ರಮುಖರಾದ ಗಿರೀಶ್ ಬಾರಿತ್ತಾಯ ಪಾರಳ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ ಫಲಾನುಭವಿ ವಿದ್ಯಾರ್ಥಿಗಳಿಗೆ ನಿಧಿಯನ್ನು ಸಾಂಕೇತಿಕವಾಗಿ ವಿತರಿಸಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಸಂಯೋಜಕರಾದ ಎಸ್. ಎನ್ ಕಾಕತ್ಕರ್ ಮಾತನಾಡಿ ಗ್ರಾಮೀಣ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ನೀಡಿದ ಈ ದತ್ತಿ ನಿಧಿ ಇತರರಿಗೂ ಪ್ರೇರಕ ಎಂದು ತಿಳಿಸಿದರು. ದತ್ತಿ ನಿಧಿಯಿಂದ ವಿದ್ಯಾರ್ಥಿಗಳ ಬಸ್ ಪಾಸ್ ಶುಲ್ಕ ಮತ್ತು ಶೈಕ್ಷಣಿಕ ಶುಲ್ಕವನ್ನು ನೀಡಲಾಯಿತು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಬೆಳಾಲು ಇದರ ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ್ ಗೌಡ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರಾಜೇಶ್ ಕುರ್ಕಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶಶಿಧರ , ಶಿಕ್ಷಕ ವೃಂದದವರು ಉಪಸ್ಥಿತರಿದ್ದರು ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಸ್ವಾಗತಿಸಿದರು. ಶಿಕ್ಷಕರಾದ ಕಿರಣ್ ವಂದಿಸಿದರು. ಸುಮನ್ ಯು. ಎಸ್ ಕಾರ್ಯಕ್ರಮ ನಿರೂಪಿಸಿದರು.

