ಧರ್ಮಸ್ಥಳ:(ಆ.22) ಧರ್ಮಸ್ಥಳ ಎಂಬ ಪುಣ್ಯಕ್ಷೇತ್ರದ ಹೆಸರನ್ನು ಹಾಳು ಮಾಡಲು ಷಡ್ಯಂತ್ರಗಳು ನಡೆಯುತ್ತಲೇ ಇದೆ. ಆದರೆ ಆ ಷಡ್ಯಂತ್ರವನ್ನು ನಡೆಸಲು ಧರ್ಮಸ್ಥಳದ ಭಕ್ತರು ಬಿಡುವುದಿಲ್ಲ.

ಇದನ್ನೂ ಓದಿ: 🟢ಉಜಿರೆ: ಎಸ್. ಡಿ. ಎಂ ಕಾಲೇಜಿನಲ್ಲಿ ಸಂಸ್ಕೃತ ಸಂಧ್ಯಾ ಕಾರ್ಯಕ್ರಮ
ಅಂತೆಯೇ ಆ.೨೨ ರಂದು ಧರ್ಮಸಂರಕ್ಷಣೆಗೋಸ್ಕರ ಮಹರ್ಷಿ ಆನಂದ ಗುರೂಜಿಯವರ ನೇತೃತ್ವದಲ್ಲಿ ಧರ್ಮಸ್ಥಳದ ಪ್ರವಚನ ಮಂಟಪದಲ್ಲಿ ಯಾಗ ನಡೆಯಿತು. ಪೂಜ್ಯರೇ ನಿಮ್ಮ ಜೊತೆ ನಾವಿದ್ದೇವೆ, ಪುಣ್ಯಕ್ಷೇತ್ರದ ಹೆಸರನ್ನು ಹಾಳು ಮಾಡಲು ನಾವು ಬಿಡುವುದಿಲ್ಲ ಎಂದು ಗುರೂಜಿಯವರು ತಿಳಿಸಿದರು. 3,000 ಕ್ಕಿಂತಲೂ ಹೆಚ್ಚು ಭಕ್ತರು ಯಾಗದಲ್ಲಿ ಪಾಲ್ಗೊಂಡಿದ್ದರು.



