ಉಜಿರೆ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಉಜಿರೆ ಇದರ ವತಿಯಿಂದ 35 ನೇ ವರ್ಷದ ಮೊಸರು ಕುಡಿಕೆ ಉತ್ಸವ ಹಾಗೂ ಸರ್ವ ಧರ್ಮ ಸಮನ್ವಯ ಸಭೆ ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಜರುಗಿತು.

ಉದ್ಘಾಟನೆಯನ್ನು ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ನೆರವೇರಿಸಿದರು.ಉಜಿರೆಯ ಹಿರಿಯ ಉದ್ಯಮಿ ಕೆ ಮೋಹನ ಶೆಟ್ಟಿಗಾರ್ ಶುಭಾಶಂಸನೆ ಗೈದರು. ಉಜಿರೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರವಣ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಇಡೀ ದಿನ ವಿವಿಧ ವಿಭಾಗಗಳಲ್ಲಿ ಮಡಿಕೆ ಒಡೆಯುವುದು ಸೇರಿದಂತೆ ವಿವಿಧ ಆಟೋಟ ಸ್ಪರ್ಧೆಗಳು ಜರುಗಿದವು.
ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಹಾಗೂ ಸರ್ವ ಧರ್ಮ ಸೌಹಾರ್ದ ಸಭಾ ಕಾರ್ಯಕ್ರಮ ಸಂಪನ್ನಗೊಂಡಿತು.
ಉಜಿರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೇರಿಮಾರ್ ಬಾಲಕೃಷ್ಣ ಗೌಡ, ಉಜಿರೆ ಅನುಗ್ರಹ ಪ.ಪೂ ಕಾಲೇಜು ಪ್ರಾಂಶುಪಾಲ ಫಾ. ವಿಜಯ್ ಲೋಬೋ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಇವರು ಸರ್ವಧರ್ಮ ಸೌಹಾರ್ದ ಸಂದೇಶ ನೀಡಿದರು. ಅಧ್ಯಕ್ಷತೆಯನ್ನು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಅಧ್ಯಕ್ಷ ಸಂಘಟಕ ಶ್ರೀನಿವಾಸ ಗೌಡ ಪಟ್ರಮೆ ವಹಿಸಿದ್ದರು.

ಸಮಾರಂಭದಲ್ಲಿ ಉಪಾಧ್ಯಕ್ಷರಾದ ಅಶ್ವಥ್ ಗೌಡ ಇಚ್ಚಿಲ, ಅರುಣ ಬನೆಸಿರಿ ಉಜಿರೆ, ಪ್ರಧಾನ ಕಾರ್ಯದರ್ಶಿ ಗುರುರಾಜ್ ಅಂತರ, ಜೊತೆ ಕಾರ್ಯದರ್ಶಿ ಗಳಾದ ರಜತ್ ಗೌಡ ಮಲೆಬೆಟ್ಟು ಮತ್ತು ವಿಜಯ ಪೂಜಾರಿ ಶಿವಗಿರಿ, ಖಜಾಂಜಿ ಸತೀಶ ಗೌಡ ಎ ಕಕ್ಕರಬೆಟ್ಟು, ಗೌರವ ಸಲಹೆಗಾರರುಗಳಾದ ಯು.ಎ ಹೆಚ್ ಇಬ್ರಾಹಿಂ, ಶ್ರೀನಿವಾಸ ಗಾಂಧಿನಗರ, ಯು.ಎ ಹಮೀದ್, ಅಪ್ಪು ನಾಯರ್, ಪ್ರವೀಣ್ ಫರ್ನಾಂಡೀಸ್, ಶ್ರೀಧರ ಪೂಜಾರಿ, ಚಿನ್ನಪ್ಪ ನಾಯ್ಕ, ನಾಗರಾಜ ಹೆಚ್ ಎನ್, ಶಶಿಧರ ಬೆಡಿಗುತ್ತು, ಜಯರಾಮ ಗೌಡ, ಅನಿಲ್ ಡಿಸೋಜಾ, ಶಿವಪ್ರಸಾದ್, ಬಿ.ಎಮ್ ಇಲ್ಯಾಸ್ ಮಾಚಾರ್, ಮೋಹನ್ ಗೌಡ, ಸೇಸಪ್ಪ ಟಿ ನಿಡಿಗಲ್, ಸುಮಂಗಲ ಬೊಟ್ಟುದಗುಡ್ಡೆ, ಮಮತ ಗುರಿಪಳ್ಳ, ಆಶಾ ಸಂತೋಷ ಮೊದಲಾದವರು ಸಹಕರಿಸಿದರು.
ಉಜಿರೆ ಗ್ರಾ.ಪಂ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಉಜಿರೆ ಕಾರ್ಯಕ್ರಮ ಸಂಯೋಜಿಸಿದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಕಾರ್ಯಕ್ರಮ ಸಂಪನ್ನಗೊಂಡಿತು.


