ಉಜಿರೆ:(ಆ.25) ಹಿಂದೂಗಳಿಗೆ ಗೋವೆಂದರೆ ಮಾತೆ, ದೇವತೆಯ ಸಮಾನ. ಗೋವಿನಲ್ಲಿ ಎಲ್ಲಾ ದೇವತೆಗಳಿದ್ದಾರೆ ಮತ್ತು ಗೋವು ಕೇಳಿದ್ದನ್ನು ಪರಿಪಾಲಿಸುತ್ತಾಳೆ ಎಂದು ಗೋವನ್ನು ಕಾಮಧೇನು ಎಂದು ಕರೆಯುತ್ತಾರೆ. ಕಾಮಧೇನು ಎಂದರೆ ಬೇಡಿದನ್ನು ಕೊಡುವುದು ಎನ್ನುವ ಅರ್ಥವಿದೆ. ಈ ಕಾಮಧೇನು ಎನ್ನುವ ಪದದ ಬಗ್ಗೆ ಭಗವದ್ಗೀತೆಯಲ್ಲಿ ಉಲ್ಲೇಖವಿದೆ.

ಗೋವು ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು ಆ.26ರಂದು ಉಜಿರೆಯಲ್ಲಿ “ಗೋವು ಉಳಿದರೆ ನಾವು” ಅಭಿಯಾನ 2026 ನಡೆಯಲಿದೆ.
ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಶರತ್‌ಕೃಷ್ಣ ಪಡ್ವೆಟ್ನಾಯರು ನಂದಗೋಕುಲ ಗೋ ಶಾಲೆಗೆ ಕಾಣಿಕೆ ಡಬ್ಬಿಯನ್ನು ನೀಡುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಲಿರುವರು ಎಂದು ಸಂಘಟಕರು ತಿಳಿಸಿದ್ದಾರೆ.
ಉಜಿರೆಯ ಎಲ್ಲಾ ಹಿ೦ದೂವರ್ತಕರು ಭಾಗವಹಿಸಬೇಕಾಗಿ ಸ್ವಾಮಿ ವಿವೇಕಾನಂದ ಸೇವಾಶ್ರಮ ಟ್ರಸ್ಟ್ (ರಿ.), ಕಳೆಂಜ ಅಧ್ಯಕ್ಷರಾದ ಡಾ| ಎಂ. ಎಂ. ದಯಾಕರ್ ರವರು ತಿಳಿಸಿದ್ದಾರೆ.



