ಉಜಿರೆ: ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ ಟ್ರಸ್ಟ್ (ರಿ.) ಕಳೆಂಜ ಇದರ ವತಿಯಿಂದ ನಡೆಯುತ್ತಿರುವ ನಂದಗೋಕುಲ ಗೋಶಾಲೆ ಪುಣ್ಯಕೋಟಿಯನ್ನು ಉಳಿಸಿ ಕೋಟಿ ಪುಣ್ಯ ಗಳಿಸಿ ಶಿರೋನಾಮೆಯಡಿ ಗೋವು ಉಳಿದರೆ ನಾವು ಅಭಿಯಾನ 2025 ಇಂದು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು.

ಇದನ್ನೂ ಓದಿ: 🟠ವೇಣೂರು: ಪರಿಶ್ರಮ ಕೋಚಿಂಗ್ ಸೆಂಟರ್ ಅದ್ಧೂರಿ ಪ್ರಾರಂಭ
ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಚಾಲನೆ ನೀಡಿದರು.

ದೇವಸ್ಥಾನಕ್ಕೆ ಬಂದ ಎಲ್ಲಾ ಭಕ್ತರಿಗೂ ಕಾಣಿಕೆ ಡಬ್ಬಿ ಯನ್ನು ಟ್ರಸ್ಟಿನ ಅಧ್ಯಕ್ಷರಾದ ಡಾ. ಎಂ ಎಂ ದಯಾಕರ್ ಅವರು ವಿತರಿಸಿದರು. ಟ್ರಸ್ಟಿನ ಕಾರ್ಯದರ್ಶಿ ಶ್ರೀ ನವೀನ್ ನೆರಿಯ,ಉದ್ಯಮಿಗಳಾದ ಶ್ರೀ ಪದ್ಮನಾಭ ಶೆಟ್ಟಿಗಾರ್, ಶ್ರೀ ರಮೇಶ್ ಧರ್ಮಸ್ಥಳ, ಶ್ರೀ ಕುಮಾರನಾಥ್ ಕಲ್ಮಂಜ, ಶ್ರೀ ರಾಘವೇಂದ್ರ ಮತ್ತು ಟ್ರಸ್ಟಿನ ಮ್ಯಾನೇಜರ್ ಶ್ರೀ ಶ್ರೀಶ ಭಟ್ ಇವರು ಸಹಕಾರ ನೀಡಿದರು.


