ವಿಟ್ಲ: ಶ್ರೀ, ಕ್ಷೇತ್ರ,ಧರ್ಮಸ್ಥಳ,ಗ್ರಾಮಾಭಿವೃದ್ಧಿ ,ಯೋಜನೆ ಬಿ.ಸಿ ಟ್ರಸ್ಟ್(ರಿ)ವಿಟ್ಲ ಅಳಿಕೆ ವಲಯದ ಜನಜಾಗೃತಿ ಕಾರ್ಯಕ್ರಮದಡಿಯಲ್ಲಿ ಸ್ಥಾಸ್ಯ ಸಂಕಲ್ಪ ಕಾರ್ಯಕ್ರಮವು ಶ್ರೀಸತ್ಯ ಸಾಯಿ ಲೋಕಸೇವಾ ಪ್ರೌಢ ಶಾಲೆ ಅಳಿಕೆಯಲ್ಲಿ ನಡೆಸಲಾಯಿತು.

ಶಾಲಾ ಅಧ್ಯಾಪಕರಾದ ನಾರಾಯಣರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಒಕ್ಕೂಟ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ. ಪೂಜಾರಿ ಸಣ್ಣಗುತು, ಒಕ್ಕೂಟ ಪದಾಧಿಕಾರಿಯಾದ ವಿಜಯಲಕ್ಷಿ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿ ಹಾಗೂ. ಜನಜಾಗೃತಿ ವಲಯಾಧ್ಯಕ್ಷರಾದ ಬಾಲಕೃಷ್ಣ ಕಾರಂತ್ ಏರುಂಬು ಇವರು ಮಕ್ಕಳಿಗೆ
ಮುಂದಿನ ಜೀವನದಲ್ಲಿ ಶಿಸ್ತನ್ನು ಆಳವಡಿಸಿಕೊಳ್ಳಬೇಕು ಹಾಗೂ ದುಶ್ಚಟಗಳ ಅರಿವು ಮೂಡಿಸುವ ಬಗ್ಗೆ. ಮಾಹಿತಿ ನೀಡಿರುತಾರೆ. ಕಾರ್ಯಕ್ರಮವನ್ನು ವಲಯ ಮೇಲ್ವಿಚಾರಕಿಯಾದ ಮೀನಾಕ್ಷಿ ನಿರ್ವಹಿಸಿ, ಸೇವಾಪ್ರತಿನಿಧಿ ಚಂದ್ರಾವತಿಯವರು ಸ್ವಾಗತಿಸಿ ವಂದಿಸಿದರು.



