Fri. Aug 29th, 2025

ಬೆಳ್ತಂಗಡಿ: ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬರುತ್ತಿದೆ ಹೊಸ ಚಲನಚಿತ್ರ ಪೈಕಾ

ಬೆಳ್ತಂಗಡಿ: ಚಲನಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿ, ಪ್ರೇಕ್ಷಕರ ಮನದಲ್ಲಿ ಮನೆ ಮಾಡಿ,ದಸ್ಕತ್ ಎಂಬ ಚಲನಚಿತ್ರದ ಮೂಲಕ ಬಹುದೊಡ್ಡ ಯಶಸ್ಸು ಪಡೆದು , ಈಗ ಅದೇ ತಂಡ ಮತ್ತೊಂದು ಹೊಸ ಮೈಲುಗಲ್ಲಿಗೆ ತಲುಪುವ ಹುರುಪಲ್ಲಿದ್ದಾರೆ.

ಇದನ್ನೂ ಓದಿ: 🔴ಗುರುವಾಯನಕೆರೆ: ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ವೇದವ್ಯಾಸ ಶಿಶುಮಂದಿರ ಹಾಗೂ

ಇದು ತುಳು , ಕನ್ನಡ, ಹಾಗೂ ಮಲಯಾಳಂ ಭಾಷೆಯಲ್ಲಿ ಸಿದ್ಧವಾಗುತ್ತಿರುವ ಹೊಸ ಚಲನಚಿತ್ರ ಅದುವೇ ಪೈಕಾ.

ಉದಯ್ ಪೂಜಾರಿ ಬಲ್ಲಾಳ್ ಬಾಗ್ ಅರ್ಪಿಸುವ ,ಪಿ ಎಸ್ ಪ್ರೊಡಕ್ಷನ್ಸ್ ನಿರ್ಮಾಣದ , ನಿರ್ಮಾಪಕ ಲಿಖಿತ್ ಆರ್ ಕೋಟ್ಯಾನ್, ಸಹ ನಿರ್ಮಾಪಕ ಸ್ವಸ್ತಿಕ್ ಆರ್ಯ, ಅನೀಶ್ ಪೂಜಾರಿ ವೇಣೂರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ನಾಯಕನಾಗಿ ಸ್ವಸ್ತಿಕ ಆರ್ಯ ಬಣ್ಣ ಹಚ್ಚಲಿದ್ದಾರೆ, ಉದಯ್ ಪೂಜಾರಿ ಬಳ್ಳಾಲ್ ಬಾಗ್ ಖಳ ನಾಯಕನ ಪಾತ್ರದಲ್ಲಿ ಮಿಂಚಲಿದ್ದು ,

ಕರಾವಳಿಯ ಹಲವಾರು ಕಲಾವಿದರ ದಂಡು ಈ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದೆ. ಸ್ಮಿತೇಶ್ ಬಾರ್ಯ, ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಛಾಯಾಗ್ರಹಣ ಸಂತೋಷ್ ಆಚಾರ್ಯ, ಸಂಕಲನ ಗಣೇಶ್ ನೀರ್ಚಾಲ್ , ಸಂಗೀತ ಸಮರ್ಥನ್ ಎಸ್ ರಾವ್, ಹಾಗೂ ತಂಡದಲ್ಲಿ ಪ್ರಜ್ಞೇಶ್ ಶೆಟ್ಟಿ , ನಿಶಿತ್ ಶೆಟ್ಟಿ ,ನೀರಜ್ ಕುಂಜರ್ಪ ,ದೀಕ್ಷಿತ್ ಕೆ ಅಂಡಿಂಜೆ , ಮನೋಜ್ ಆನಂದ್ , ದೀಕ್ಷಿತ್ ಧರ್ಮಸ್ಥಳ, ವಿನೋದ್ ರಾಜ್ ಕಲ್ಮಂಜ ಜೊತೆಯಾಗಿದ್ದಾರೆ.

ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ತಂಡ, ಪೈಕಾ ಮೂಲಕ ಮನರಂಜನೆಯ ಜೊತೆಗೆ ದೊಡ್ಡ ಯಶಸ್ಸು ಸಾಧಿಸಲಿ.

Leave a Reply

Your email address will not be published. Required fields are marked *