ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಆಘಾತಕಾರಿ ಬೆಳವಣಿಗೆಗಳು ಮುಂದುವರಿಯುತ್ತಿವೆ. ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಜಯಂತ್ ಅವರು ಪ್ರಮುಖ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ದೂರುದಾರರೂ ಆಗಿರುವ ಸಾಕ್ಷಿ ಚಿನ್ನಯ್ಯ ಅವರನ್ನು ದೂರು ಸಲ್ಲಿಸುವ ಮೊದಲು ದೆಹಲಿಗೆ ಕರೆದೊಯ್ಯಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಜಯಂತ್ ಅವರ ಪ್ರಕಾರ, ಬುರುಡೆಯನ್ನು ಮೊದಲಿಗೆ ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಲಾಗಿತ್ತು. ಈ ಕಾರಣಕ್ಕಾಗಿ ಗಿರೀಶ್ ಮಟ್ಟಣ್ಣನವರು, ಚಿನ್ನಯ್ಯ, ಸುಜಾತಾ ಭಟ್ ಮತ್ತು ಜಯಂತ್ ಸೇರಿ ನಾಲ್ವರು ಕಾರಿನಲ್ಲಿ ದೆಹಲಿಗೆ ತೆರಳಿದ್ದರು. ಆದರೆ, ಅಲ್ಲಿ ಯೋಜನೆ ಯಶಸ್ವಿಯಾಗದ ಕಾರಣ ಬುರುಡೆಯನ್ನು ವಾಪಸ್ ತರಲಾಯಿತು ಎಂದು ಜಯಂತ್ ವಿವರಿಸಿದ್ದಾರೆ.

ಬೆಂಗಳೂರಿನ ತಮ್ಮ ಮನೆಯಲ್ಲಿ ಚಿನ್ನಯ್ಯ ಮೂರು ದಿನ ಇದ್ದರು ಎಂದು ಜಯಂತ್ ಹೇಳಿದ್ದಾರೆ. “ಆತನಿಗೆ ಊಟ ನೀಡಿದ್ದೇನೆ. ನನ್ನ ಮನೆಯಲ್ಲಿ ನನ್ನ ಮಗ ಮತ್ತು ಮಗಳಿದ್ದಾರೆ. ಅವರನ್ನು ಕೇಳಿದರೆ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ” ಎಂದು ಅವರು ತಿಳಿಸಿದ್ದಾರೆ.


