Sun. Aug 31st, 2025

ಉಜಿರೆ: ಉಜಿರೆಯಲ್ಲಿ ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಪಥಸಂಚಲನ

ಉಜಿರೆ: ಬೆಳ್ತಂಗಡಿ ಪೊಲೀಸ್ ಠಾಣೆಯ ಪೋಲಿಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜಂಟಿ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಉಜಿರೆ ಪ್ರದೇಶದಲ್ಲಿ ಕ್ಷಿಪ್ರ ಕಾರ್ಯ ಪಡೆ ವತಿಯಿಂದ ಪಥಸಂಚಲನವನ್ನು ಯಶಸ್ವಿಯಾಗಿ ನಡೆಸಲಾಯಿತು. ಸೂಕ್ಷ್ಮ ‌ಪ್ರದೇಶ ಗುರುತಿಸಿ‌ ಪಥಸಂಚಲನ‌ ನಡೆಸಲಾಯಿತು.

ಈ ಸಮಯದಲ್ಲಿ ಹಿಂದೂ, ಮುಸ್ಲಿಂ ಹಬ್ಬಗಳನ್ನು ಆಚರಣೆ ಮಾಡುತ್ತಿದ್ದಾರೆ. ಕೋಮು ಸೂಕ್ಷ್ಮ ಪ್ರದೇಶವಾದ ಕಾರಣ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜನರಿಗೆ ಕಾನೂನಿನ ಮೇಲೆ ನಂಬಿಕೆ ಬರಲು ಮತ್ತು ಕಾನೂನನ್ನು ಸಮರ್ಥವಾಗಿ ನಿಭಾಯಿಸುತ್ತಾರೆ ಎಂದು ಅರಿವು ಮೂಡಿಸಲು ಈ ಪಥ ಸಂಚಲನವನ್ನು ಆಯೋಜಿಸಲಾಗಿದೆ.

ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಾದ ಬಿ.ಜಿ ಸುಬ್ಬಾಪುರ ಮಠ್ ರವರು ಈ ಪಥ ಸಂಚಲನದ ನೇತೃತ್ವ ವಹಿಸಿದರು.

Leave a Reply

Your email address will not be published. Required fields are marked *