ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶ್ರೀ ಮಂಜುನಾಥ ದಳದ ಬನ್ನಿಸ್, ಕಬ್ಸ್ ಬುಲ್ ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಸ್ಕೌಟ್ ಗಣಪತಿ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿದರು.

ಇದನ್ನೂ ಓದಿ: ⭕ಉಡುಪಿ: ಒಂದೂವರೆ ವರ್ಷದ ಮಗುವಿಗೆ ನೇಣು ಬಿಗಿದು ಕೊಂದು, ತಾಯಿ ಆತ್ಮಹತ್ಯೆ
ಮುಖ್ಯ ಅತಿಥಿಯಾಗಿ ಡಾಕ್ಟರ್ ಪ್ರದೀಪ್ ನಾವೂರು ಆಗಮಿಸಿ ಧಾರ್ಮಿಕ ಪ್ರವಚನ ನೀಡಿದರು. ಶ್ರೀ ಧರ್ಮಸ್ಥಳದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ನಿಮ್ಮೆಲ್ಲರಿಗೂ ಒಂದು ಹೆಮ್ಮೆ , ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಸಂಸ್ಕೃತಿಗಳು, ನ್ಯಾಯಕತ್ವ ವ್ಯಕ್ತಿತ್ವದ ವಿದ್ಯಾರ್ಥಿಗಳು ಪ್ರತಿ ವರ್ಷ ಸಂಸ್ಥೆಯಿಂದ ಹೊರಹೊಮ್ಮು ತ್ತಿದ್ದಾರೆ ಎಂದು ತಿಳಿಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಲತಾ ಎಂ ಆರ್ ಉಪಸ್ಥಿತರಿದ್ದರು.



ಪ್ರಾಪ್ತಿ ವಿ ಶೆಟ್ಟಿ ಪರಿಸರಸ್ನೇಹಿ ಗಣಪತಿಯನ್ನು ತಯಾರಿಸಿದರು. ಕಬ್ ವಿದ್ಯಾರ್ಥಿ ಶ್ರೀರಾಮ ಭಟ್ ಮೂರ್ತಿಗೆ ಪೂಜಾ ಕಾರ್ಯ ನಿರ್ವಹಿಸಿದರು. ವಿದ್ಯಾರ್ಥಿಗಳು ಪೂಜೆ , ಭಜನೆ, ಇತ್ಯಾದಿಗಳಿಂದ ಗಣಪತಿಯ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. ವಿಶೇಷವೆಂದರೆ ಗಣಪತಿಗೆ ಸ್ಕೌಟ್ ಗೈಡ್ ಸ್ಕಾರ್ಫ್ ತೊಡಿಸಿ , ಸ್ಕೌಟ್ ಗಣಪತಿ ಎಂಬ ಶೀರ್ಷಿಕೆಯಿಂದ ತೀರ್ಥ ಪ್ರಸಾದ ದೊಂದಿಗೆ ಪುನೀತರಾದರು. ತದನಂತರ ಗಣಪತಿ ಮೂರ್ತಿಯನ್ನು ಪಕ್ಕದ ಕೊಳದಲ್ಲಿ ವಿಸರ್ಜಿಸಲಾಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಸ್ಕೌಟ್ ಗೈಡ್ ಸಂಯೋಜಕ ಶಿಕ್ಷಕಿ ಪ್ರಮೀಳಾ ಪೂಜಾರಿ ಕಾರ್ಯಕ್ರಮ ಸಂಘಟಿಸಿದರು . ಸ್ಕೌಟ್ಸ್ ಗೈಡ್ಸ್ ಶಿಕ್ಷಕ/ಕಿ ಯರಾದ ಮಂಜುನಾಥ್, ಜಯರಾಮ್, ಕಾರುಣ್ಯ, ನೀತಾ ಕೆ.ಎಸ್, ಗೀತಾ ಪಿ, ಜಯಲಕ್ಷ್ಮಿ, ಪ್ರಮೀಳಾ ಎನ್, ರಮ್ಯಾ ಬಿ ಎಸ್ ರವರ ಸಹಯೋಗದೊಂದಿಗೆ ಶಾಲೆಯ ಶಿಕ್ಷಕ ವೃಂದದವರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಗೊಂಡಿತು.
ಗೈಡ್ ವಿಧ್ಯಾರ್ಥಿಗಳಾದ ಅಭಿಜ್ಞಾ ಸ್ವಾಗತಿಸಿ, ಅತಿಥಿಗಳ ಪರಿಚಯವನ್ನು ಅನಘಾ, ಧನ್ಯವಾದವನ್ನು ಉನ್ನತಿ ಎಸ್ , ದಿಶಾ ಡಿ ಎ ನಿರೂಪಿಸಿ ,ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
