ಉಜಿರೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೆಳ್ತಂಗಡಿಯ ವತಿಯಿಂದ ಮರಿಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆ ಬೆದ್ರಬೆಟ್ಟು ನಡೆದ 2025ನೇ 26ನೇ ಸಾಲಿನ ಪ್ರೌಢಶಾಲಾ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ ಉಜಿರೆಯ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಬೆಸ್ಟ್ ಆಲ್ ರೌಂಡರ್ ಅನ್ಸಿಕ, ಬೆಸ್ಟ್ ಲಿಬೆರೊ ಅರ್ಪಿತ ಇವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನ್ಸಿಕ, ಅಭಿಜ್ಞಾ, ಅನುಶ್ರೀ, ಅರ್ಪಿತ, ರೋಸಾ ಜಾಯ್ , ವಂದಿತ ಇವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಇವರಿಗೆ ದೈಹಿಕ ಶಿಕ್ಷಕರಾದ ವಸಂತ್ ಹೆಗ್ಡೆ ಇವರು ತರಬೇತಿ ನೀಡಿದ್ದು ವಿಜೇತ ಕ್ರೀಡಾಳುಗಳನ್ನು ಶಾಲಾ ಸಂಚಾಲಕರು ಪ್ರಾಂಶುಪಾಲರು ಶಿಕ್ಷಕರು ಅಭಿನಂದಿಸಿದ್ದಾರೆ.



