Fri. Sep 5th, 2025

ಉಪ್ಪಿನಂಗಡಿ: ಶ್ರೀ ಮಹಾಭಾರತ ಸರಣಿ ತಾಳ ಮದ್ದಳೆಯ ನಾಲ್ಕನೇ ಹಂತದ ಕಾರ್ಯಕ್ರಮ

ಉಪ್ಪಿನಂಗಡಿ: ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟಿನ 50ನೇ ವರ್ಷದ ಸುವರ್ಣ ಶತಕ ಶ್ರೀ ಮಹಾಭಾರತ ಸರಣಿಯ ನಾಲ್ಕನೇ ಹಂತದ ಆಹ್ವಾನಿತ ತಂಡಗಳ ತಾಳಮದ್ದಳೆ ಕಾರ್ಯಕ್ರಮ ಇಚ್ಚುರೂ ಶ್ರೀ ಬಾಲಸುಬ್ರಮಣ್ಯ ದೇವಸ್ಥಾನದಲ್ಲಿ ಜರಗಿತು.

ಕಲಾವಿದ ಹರ್ಷ ನಾರಾಯಣ ಶೆಟ್ಟಿ ನೆತ್ತರ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಶ್ರೀ ಮಹಿಷ ಮರ್ದಿನಿ ಯಕ್ಷಗಾನ ಸಂಘ ಪಾರೆಂಕಿ ಇವರಿಂದ ಜರಗಿದ ವೀರ ಘಟೋತ್ಕಚ ಪ್ರಸಂಗದಲ್ಲಿ ಭಾಗವತರಾಗಿ ಗಣೇಶ ಸಾಲಿಯಾನ್, ಕಿಶೋರ್ ಶೆಟ್ಟಿ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಥಮ್ ವಾಮದಪದವು ಚಕ್ರತಾಳದಲ್ಲಿ ಕೇಶವ ಮಚ್ಚಗುರಿ ಅರ್ಥಧಾರಿಗಳಾಗಿ ಪ್ರಭಾಕರ ಪಿ. ಎಂ,ಹರ್ಷ ನಾರಾಯಣ ಶೆಟ್ಟಿ ನೆತ್ತರ, ಶ್ರೀನಿವಾಸ ಮೂರ್ತಿ ಮಡಾವು, ಕಿಶೋರ್ ಕುಮಾರ್ ಗೌಡ ಬಸವನಗುಡಿ, ನಾಗೇಶ ಎಂ, ಭರತ ಶೆಟ್ಟಿ ಹಾರಬೆ ಭಾಗವಹಿಸಿದ್ದರು

ಶ್ರೀ ವಿನಾಯಕ ಯಕ್ಷಗಾನ ಮಂಡಳಿ ಬಲ್ಯ ನೆಲ್ಯಾಡಿ ಪ್ರಸ್ತುತಪಡಿಸಿದ ವೀರವರ್ಮ ಕಾಳಗ ಪ್ರಸಂಗದಲ್ಲಿ ಭಾಗವತರಾಗಿ ಡಿ.ಕೆ ಆಚಾರ್ಯ ಅಲಂಕಾರು, ಮೋಹನ ಶರವೂರು, ಶ್ರೀಹರಿ ನಗ್ರಿ ಅರ್ಥಧಾರಿಗಳಾಗಿ ಗುಡ್ಡಪ್ಪ ಬಲ್ಯ,ತಿಮ್ಮಪ್ಪ ಗೌಡ ಕೋಟೆಕಾರು, ಕಿರಣ್ ಗೌಡ ಪುತ್ತಿಲ,ಗಂಗಾಧರ ಶೆಟ್ಟಿ ಅಮ್ಮೆತ್ತಿಮಾರು, ದಿವಾಕರ ಆಚಾರ್ಯ ಹಳೆನೇರೆಂಕಿ, ಜಯರಾಮ ಗೌಡ ಬಲ್ಯ ಭಾಗವಹಿಸಿದ್ದರು.

ಭಕ್ತ ಮಯೂರ ಧ್ವಜ ಪ್ರಸಂಗವನ್ನು ಪ್ರಸ್ತುತಪಡಿಸಿದ ಯಕ್ಷ ಸಿಂಧೂರ ಮಹಿಳಾ ಯಕ್ಷಗಾನ ಕೂಟ ತಲಪಾಡಿ ಮಂಗಳೂರು ತಂಡದಲ್ಲಿ ಭಾಗವತರಾಗಿ ರಾಜಾರಾಮ ಹೊಳ್ಳ ಕೈರಂಗಳ ಹಿಮ್ಮೇಳದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಅರ್ಥಧಾರಿಗಳಾಗಿ ಡಾ. ಕೃತಿ ಹರೀಶ್ ರಾವ್ ಎಂ. ಡಿ,ಶ್ರೀಮತಿ ರಾಧಾ ಆರ್ ಹೊಳ್ಳ, ಶ್ರೀಮತಿ ಪ್ರಸನ್ನ ಯನ್ ಕೆದ್ಲಾಯ, ಶ್ರೀಮತಿ ಚಂದ್ರಿಕಾ ಸುರೇಶ್ ರಾವ್ ಭಾಗವಹಿಸಿದ್ದರು.


ತಂಡಗಳ ಸದಸ್ಯರಿಗೆ ಪ್ರಶಂಸಾ ಪತ್ರವನ್ನು ಲಕ್ಷ್ಮೀಶ ಅಮ್ಮಣ್ಣಾಯ, ಭಾರತಿ ಎಮ್.ಎಲ್ ಗೇರುಕಟ್ಟೆ, ಸಾಧನಾ ಪುತ್ತೂರಾಯ ನೀಡಿದರು.
ತಂಡಗಳ ಮುಖ್ಯಸ್ಥರನ್ನು ಶ್ರೀ ಕಾಳಿಕಾಂಬ ಟ್ರಸ್ಟಿನ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ, ಶ್ರೀಮತಿ ಜಯಲಕ್ಷ್ಮಿ ಸುಬ್ರಹ್ಮಣ್ಯ ರಾವ್, ಸುರೇಶ್ ಪುತ್ತೂರಾಯ ಗೌರವಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ ಶ್ರೀ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಸುರೇಶ್ ಪುತ್ತೂರಾಯ ಇವರನ್ನು ಟ್ರಸ್ಟಿನ ಸಹ ಕಾರ್ಯದರ್ಶಿ, ಪದ್ಮನಾಭ ಕುಲಾಲ್ ಗೌರವಿಸಿದರು. ನೂರಕ್ಕಿಂತಲೂ ಹೆಚ್ಚು ತಾಳಮದ್ದಳೆ ಮತ್ತು ಯಕ್ಷಗಾನ ಪ್ರದರ್ಶನಗಳನ್ನು ಕ್ಷೇತ್ರದಲ್ಲಿ ನಡೆಸಿದ್ದು ಮುಂದಕ್ಕೂ ಪ್ರೋತ್ಸಾಹ ನೀಡುವುದಾಗಿ ಪುತ್ತೂರಾಯರು ತಿಳಿಸಿದರು.

ಪೂರ್ಣಿಮಾ ಪುತ್ತೂರಾಯ, ಶ್ರುತಿವಿಸ್ಮಿತ್, ಸೂರ್ಯನಾರಾಯಣ ಪುತ್ತೂರಾಯ, ಪ್ರದೀಪ ಹೆಬ್ಬಾರ್ ಚಾರ, ಸುಪ್ರಸಾದ್ ಪುತ್ತೂರಾಯ ವಿವಿಧ ಕಾರ್ಯಕ್ರಮಗಳನ್ನು   ನಿರ್ವಹಿಸಿದರು.

Leave a Reply

Your email address will not be published. Required fields are marked *