Sat. Sep 6th, 2025

ಸೆಪ್ಟೆಂಬರ್‌.7 ರಂದು ಖಗ್ರಾಸ ಚಂದ್ರಗ್ರಹಣ – ಯಾವ ರಾಶಿಗೆ ಶುಭಫಲ, ಯಾವ ರಾಶಿಗೆ ಅಶುಭ ಫಲ.? – ಪ್ರಭಾಕರ ಭಟ್, ಇಡ್ಯಾಶ್ರಯರವರು ಕೊಟ್ಟ ಸಲಹೆಯೇನು..?

ಬೆಳ್ತಂಗಡಿ: ಇದೇ ತಾ -07.09.2025 ರವಿವಾರ ಖಗ್ರಾಸ ಚಂದ್ರಗ್ರಹಣ ಇದೆ.
ಗ್ರಹಣ ಸ್ಪರ್ಶವು ರಾತ್ರಿ 09-57 ಕ್ಕೆ, ಗ್ರಹಣ ಮಧ್ಯ : ರಾತ್ರಿ 11-42 ಕ್ಕೆ, ಗ್ರಹಣ ಮೋಕ್ಷ :ರಾತ್ರಿ 01-27 ಕ್ಕೆ ಇದೆ. ಯಾವ ಸಮಯದಲ್ಲಿ ನಾವು ಭೋಜನವನ್ನು ಸೇವಿಸಬಹುದು. ಇದರ ನಿಯಮಗಳೇನು ನೋಡಿಕೊಂಡು ಬರೋಣ.


ಭೋಜನ ನಿಯಮ:
ಈ ದಿನ ಮಧ್ಯಾಹ್ನ 12-30 ಘಂಟೆ ಒಳಗೆ ಆಹಾರ ಸೇವಿಸಬಹುದು, ಬಾಲವೃದ್ಧರು ಸಂಜೆ 6.30 ಘಂಟೆ ಒಳಗೆ ಭೋಜನ ಸೇವಿಸಬಹುದು. ತದ ನಂತರ ಆಹಾರ ಸೇವನ ಇಲ್ಲ. ಗ್ರಹಣ ಮೋಕ್ಷ ನಂತರ ಮರುದಿನ ಸ್ನಾನ ಮಾಡಿ ನಂತರ ಮರುದಿನ ಉಪಹಾರ ಸೇವಿಸಬಹುದು. ಪೂರ್ವಭಾದ್ರ ನಕ್ಷತ್ರದ ಕುಂಭರಾಶಿಯಲ್ಲಿ ಚಂದ್ರನಿಗೆ ರಾಹುಗ್ರಹಣವು. ಈ ನಕ್ಷತ್ರ ರಾಶಿಯಲ್ಲಿ ಜನಿಸಿದವರಿಗೂ ಮೀನ-ಕರ್ಕಾಟಕ ರಾಶಿಗಳಲ್ಲಿ ಜನಿಸಿದವರಿಗೂ ಗ್ರಹಣ ಸಂಬಂಧ ಅರಿಷ್ಟವಿದೆಯೆಂದು ಹೇಳಲಾಗಿದೆ.

ಪ್ರಭಾಕರ ಭಟ್, ಇಡ್ಯಾಶ್ರಯರವರು ಕೊಟ್ಟ ಸಲಹೆಯೇನು..?


ಗ್ರಹಣ ಸಮಯದಲ್ಲಿ ಗ್ರಹಣ ಶಾಂತಿ ಹಾಗೂ ಜಪ ತಪ, ಅನುಷ್ಠಾನ, ವಿಷ್ಣು ಸಹಸ್ರ ನಾಮ ಪಠಣ ಮಾಡುವುದು ಉತ್ತಮ. ರವಿವಾರ ರಾತ್ರಿ 9.30 ರಿಂದ 1.30 ರ ವರೆಗೆ ಗ್ರಹಣ ಶಾಂತಿ ಜಪ ಪಾರಾಯಣ ನಮ್ಮ ಇಡ್ಯಾಶ್ರಯದಲ್ಲಿ ನೆರವೇರಲಿದೆ.
ಗ್ರಹಣ ಶಾಂತಿ ಜಪ ಮಾಡಿಸುವವರು ಮೊಬೈಲ್ ನಂಬರಿಗೆ 99018 68019 ಕರೆ ಮಾಡಿ ತಿಳಿಸಬಹುದು.

Leave a Reply

Your email address will not be published. Required fields are marked *