Mon. Sep 8th, 2025

ನೆರಿಯ: ನೆರಿಯ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ನೆರಿಯ: ನೆರಿಯ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಸಪ್ಟೆಂಬರ್ 7 ರಂದು ನಡೆದ ನೆರಿಯ ಶಕ್ತಿ ಕೇಂದ್ರ ಮಟ್ಟದ ಅಭ್ಯಾಸ ವರ್ಗ ಸಭೆ ಸೇವಾ ಸಹಕಾರಿ ಸಭಾ ಭವನದಲ್ಲಿ ನಡೆಯಿತು.

ಇದನ್ನೂ ಓದಿ: 🔴ಪಾರೆಂಕಿ : ಕುಕ್ಕಳ, ಪಾರೆಂಕಿ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತರಾದ ಲೋಕಯ್ಯ ಗೌಡ ಇಟ್ಯಾಡಿ, ಸೋಂಪ ಗೌಡ ಬಾಂದಡ್ಕ, ಶಾಂತಪ್ಪ ಮಲೆಕುಡಿಯ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಭ್ಯಾಸ ವರ್ಗದ ಸಂಚಾಲಕರಾದ ಕೊರಗಪ್ಪ ಗೌಡ ಚಾರ್ಮಾಡಿ ಉದ್ಘಾಟನಾ ಭಾಷಣ ಮಾಡಿದರು. ವೇದಿಕೆಯಲ್ಲಿ ಬಾಬು ಗೌಡ ಪರ್ಪಲ ಉಪಸ್ಥಿತರಿದ್ದರು.

ಈ ಮಹಾಬಲ ಗೌಡ,ರಾಜೇಶ್ ಪೆರ್ಮುಡ, ವೃಷಾಂಕ್ ಖಾಡಿಲ್ಕರ್, ಮಾಹಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ನಿರಂಜನ್ ಶೆಟ್ಟಿ ಇವರುಗಳು ಬೈಠಕ್ ನೀಡಿದರು. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ರವರು ಸಮಾರೋಪ ಭಾಷಣ ಮಾಡಿ, ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ನೆರೆದ ಕಾರ್ಯಕರ್ತರಿಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಉಜಿರೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಯಶವಂತ ಪುದುವೆಟ್ಟು, ಪಂಚಾಯತ್ ಅಧ್ಯಕ್ಷ ಶ್ರಿಮತಿ ವಸಂತಿ, ಶಕ್ತಿ ಕೇಂದ್ರದ ಪ್ರಮುಖರಾದ ವಿಶ್ವನಾಥ ದ ಗೌಡ, CA ಅಧ್ಯಕ್ಷರಾದ ಪ್ರಕಾಶ್ ನಾರಾಯಣ ನೆರಿಯ ಪಂಚಾಯತ್ ಸದಸ್ಯರುಗಳು, ಬೂತ್ ಅಧ್ಯಕ್ಷರುಗಳು, ಪದಾಧಿಕಾರಿಗಳು, ಹಾಗು ಅನನ್ಯ ಜವಾಬ್ದಾರಿಯ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *