ಉಜಿರೆ: ಕೇದಾರನಾಥವು ಉತ್ತರಾಖಂಡದ ಹಿಮಾಲಯದಲ್ಲಿರುವ ಶಿವನ ದೇವಾಲಯ, ಇದು ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಇಲ್ಲಿ ಶಿವನನ್ನು ಭಗವಾನ್ ಕೇದಾರನಾಥನೆಂದು ಪೂಜಿಸಲಾಗುತ್ತದೆ ಮತ್ತು ಈ ಸ್ಥಳವು ಹಿಂದೂಗಳಿಗೆ ಅತ್ಯಂತ ಪವಿತ್ರ ತೀರ್ಥಯಾತ್ರಾ ಸ್ಥಳವಾಗಿದೆ.

ಉಜಿರೆಯ ಎಸ್.ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರ ನೇತೃತ್ವದಲ್ಲಿ ಒಟ್ಟು 13 ಆಸ್ಪತ್ರೆಯ ಸಿಬ್ಬಂದಿಗಳು ಕೇದಾರನಾಥಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳದ “ಸತ್ಯಮೇವ ಜಯತೆ” ಬ್ಯಾನರ್ ಕೇದಾರನಾಥದಲ್ಲಿ ರಾರಾಜಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಬ್ಬಂದಿಯೋರ್ವರು ಧರ್ಮಸ್ಥಳದ ಸತ್ಯಮೇವ ಜಯತೆ ಯ ಬ್ಯಾನರ್ ಅನ್ನು ಕೇದಾರನಾಥದಲ್ಲಿ ರಾರಾಜಿಸಬೇಕೆಂಬುದು ನಮ್ಮೆಲ್ಲರ ಕನಸಾಗಿತ್ತು, ಆ ಕನಸಿಗೆ ಬೆಂಬಲ ನೀಡಿದವರು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ರವರು ಎಂದು ಹೇಳಿದರು.


