Mon. Sep 15th, 2025

ಉಜಿರೆ : ಉಜಿರೆ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಆಡಳಿತ ಮಂಡಳಿಯ 15 ನಿರ್ದೇಶಕರುಗಳ ಸ್ಥಾನಕ್ಕೆ ಅವಿರೋಧ ಆಯ್ಕೆ

ಉಜಿರೆ : ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘ ಉಜಿರೆ ಇದರ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಯ 15 ನಿರ್ದೇಶಕರುಗಳ ಸ್ಥಾನಕ್ಕೆ ಸೆ.21 ರಂದು ನಿಗದಿಯಾಗಿದ್ದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:⭕ಜಾರ್ಖಂಡ್‌ನಲ್ಲಿ ಉನ್ನತ ಮಟ್ಟದ ನಕ್ಸಲ್ ಕಮಾಂಡರ್ ಸೇರಿ ಮೂವರು ಮಾವೋವಾದಿಗಳು ಹತ್ಯೆ


ಸಹಕಾರಿ ಸಂಘ- ಸಂಸ್ಥೆಗಳು ಸ್ಥಾನದಿಂದ ಹಾಲಿ ಅಧ್ಯಕ್ಷ ಶ್ರೀಧರ ಜಿ. ಭಿಡೆ, ಸಾಮಾನ್ಯ ಸ್ಥಾನ ಬೆಳ್ತಂಗಡಿ ಫಿರ್ಕಾದಿಂದ ಹಾಲಿ ಉಪಾಧ್ಯಕ್ಷ ಅನಂತ ಭಟ್ ಮಚ್ಚಿಮಲೆ, ಹಿಂದುಳಿದ ವರ್ಗ ಎ ಮೀಸಲು ಸ್ಥಾನ ಬೆಳ್ತಂಗಡಿ ಫಿರ್ಕಾದಿಂದ ಸೋಮನಾಥ ಬಂಗೇರ ವರ್ಪಾಳೆ ಅಳದಂಗಡಿ, ಹಿಂದುಳಿದ ವರ್ಗ ಬಿ ಮೀಸಲು ಸ್ಥಾನ ಕೊಕ್ಕಡ ಫಿರ್ಕಾದಿಂದ ಹೆಚ್. ಪದ್ಮಗೌಡ ಬೆಳಾಲು,

ಗ್ರೇಸಿಯನ್ ವೇಗಸ್ ಕನ್ಯಾಡಿ-|| ಕಲ್ಮಂಜ, ಮತ್ತು ಬಾಲಕೃಷ್ಣ ಗೌಡ ಕೇರಿಮಾರ್, ಸಾಮಾನ್ಯ ಸ್ಥಾನ ವೇಣೂರು ಫಿರ್ಕಾದಿಂದ ಡಾ. ಶಶಿಧರ ಡೋಂಗ್ರೆ ಶೇಣೆರೆಬೈಲ್ ಅಳದಂಗಡಿ, ಸಾಮಾನ್ಯ ಸ್ಥಾನ ಕೊಕ್ಕಡ ಫಿರ್ಕಾದಿಂದ ಶಾಜಿ ಪಿ.ಎ ಶಿಬಾಜೆ, ಕೆ.ಜೆ ಆಗಸ್ಟಿನ್ ಪೆರ್ಮಾಣು ನಡ, ಭರತ್ ಕುಮಾರ್ ಹೆಚ್. ಇಂದಬೆಟ್ಟು ಬಂಗಾಡಿ, ತಿಮ್ಮಪ್ಪ ಗೌಡ ಪಿ. ಬನಂದೂರು ಬೆಳಾಲು, ಮಹಿಳಾ ಮೀಸಲು ಸ್ಥಾನದಿಂದ ಸುಭಾಷಿಣಿ ಆ‌ರ್. ಮಠದಬೈಲು ಬೆಳ್ತಂಗಡಿ, ಜಯಶ್ರೀ ಡಿ.ಎಂ. ಉಜಿರೆ,

ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಬೈರಪ್ಪ ಕಲ್ಲಗುಡ್ಡೆ ಕಳೆಂಜ, ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಕೆ. ರಾಮನಾಯ್ಕ ಕಾಯರ್ತಡ್ಕ ಕಳೆಂಜ ಇವರು ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಪುತ್ತೂರು ಉಪ ಸಹಾಯಕ ನಿಬಂಧಕರಾದ ಎಂ. ರಘು ಕಾರ್ಯನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಉಜಿರೆ ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಜು ಶೆಟ್ಟಿ ಸಹಕರಿಸಿದರು.

Leave a Reply

Your email address will not be published. Required fields are marked *