ಬೆಳ್ತಂಗಡಿ: ಕಾಶಿಪಟ್ಣ ,ಪಡ್ಡಂದಡ್ಕ ರಸ್ತೆಯು ಹಲವು ವರ್ಷಗಳಿಂದ ತೀರಾ ಹದಗೆಟ್ಟಿದ್ದು , ಯಾವುದೇ ಪಕ್ಷದ ಜನಪ್ರತಿನಿಧಿಗಳಿಂದ ಸ್ಪಂದನೆ ಕಾಣದೆ

ಇದ್ದುದರಿಂದ ರಸ್ತೆ ದುರಸ್ಥಿಗೆ ಸ್ಥಳೀಯ ಶಾಲಾ ಮಕ್ಕಳು ಮುಂದೆ ಬಂದು ಸ್ವತಃ ಆಸಕ್ತಿ ವಹಿಸಿ ಹೊಂಡ ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರ ಯೋಗ್ಯಗೊಳಿಸಲು ಪ್ರಯತ್ನಿಸಿದ್ದಾರೆ.
ಶಾಲಾ ಮಕ್ಕಳ ಉತ್ತಮ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



