Mon. Sep 15th, 2025

ಮಂಗಳೂರು: ರಾಣಿ ಅಬ್ಬಕ್ಕ ರಥಯಾತ್ರೆ ಕುರಿತು ಎಬಿವಿಪಿ ವತಿಯಿಂದ ಪತ್ರಿಕಾಗೋಷ್ಠಿ

ಮಂಗಳೂರು: ಎಬಿವಿಪಿ ರಾಣಿ ಅಬ್ಬಕ್ಕ ರಥಯಾತ್ರೆ, ಮಂಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಸಮಾರೋಪ ಸಮಾರಂಭದ ಕುರಿತು ಇಂದು ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.

ಇದನ್ನೂ ಓದಿ: 🔴 ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ ರೂ.200ಕ್ಕೆ ಇಳಿಕೆ

ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಸುವಿತ್ ಶೆಟ್ಟಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಈ ನೆಲದ ವೀರ ರಾಣಿ ಅಬ್ಬಕ್ಕಳ 500ನೇ ಜನ್ಮ ಜಯಂತಿಯ ಪ್ರಯುಕ್ತ ಅಬ್ಬಕ್ಕ ರಥಯಾತ್ರೆಯನ್ನ ಸೆಪ್ಟೆಂಬರ್ 6 ರಿಂದ ಆರಂಭಿಸಿದ್ದು ರಾಜ್ಯಾದ್ಯಂತ ಬಹಳ ಯಶಸ್ವಿ ಯಾಗಿ ಸಂಚರಿಸಿ ಸೆಪ್ಟೆಂಬರ್ 16ರಂದು ಮಂಗಳೂರು ತಲುಪಲಿದೆ,

ಆ ಪ್ರಯುಕ್ತ ಬೆಳಗ್ಗೆ 9.30ಕ್ಕೆ ಸರಿಯಾಗಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಕ್ರೀಡಾಂಗಣದಿಂದ,ಜ್ಯೋತಿ ಸರ್ಕಲ್ ಮಾರ್ಗವಾಗಿ ಹಂಪನಕಟ್ಟೆಯ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದ್ದು, ಸುಮಾರು 3000ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ, ಅನಂತರ 11.30ಕ್ಕೆ ಸರಿಯಾಗಿ ಪುರಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆಯ 5.30ರ ಹೊತ್ತಿಗೆ ರಥ ಅಬ್ಬಕ್ಕಳ ಕರ್ಮಭೂಮಿ ಉಳ್ಳಾಲ ತಲುಪಿ ನಂತರ ಮಾಡೂರು ಅಯ್ಯಪ್ಪ ಮಂದಿರದಿಂದ ಬೀರಿ ಜಂಕ್ಷನ್ ಗಣೇಶ ಮಂದಿರದ ಬಳಿ ಸಾರ್ವಜನಿಕ ಸಭೆ ಹಾಗೂ ರಥ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ  ಎಂದು ತಿಳಿಸಿದರು.

Leave a Reply

Your email address will not be published. Required fields are marked *