Mon. Sep 15th, 2025

Jharkhand: ಜಾರ್ಖಂಡ್‌ನಲ್ಲಿ ಉನ್ನತ ಮಟ್ಟದ ನಕ್ಸಲ್ ಕಮಾಂಡರ್ ಸೇರಿ ಮೂವರು ಮಾವೋವಾದಿಗಳು ಹತ್ಯೆ

(ಸೆ.15) ಪೊಲೀಸರು ಜಾರ್ಖಂಡ್​ನಲ್ಲಿ ನಡೆಸಿದ ಎನ್​ಕೌಂಟರ್​ನಲ್ಲಿ ಮೂವರು ನಕ್ಸಲರು ಸಾವನ್ನಪ್ಪಿದ್ದಾರೆ. ಈ ಮೂವರಲ್ಲಿ, ಒಬ್ಬ ನಕ್ಸಲ್ ಕಮಾಂಡರ್​ನನ್ನು ಜೀವಂತ ಅಥವಾ ಮೃತವಾಗಿ ಹಿಡಿದುಕೊಟ್ಟವರಿಗೆ ₹1 ಕೋಟಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಗೋರ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಟಿತ್ರಿ ಅರಣ್ಯದಲ್ಲಿ ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ನಡೆದಿದೆ. ಭದ್ರತಾ ಪಡೆಗಳು ನಿಷಿದ್ಧ ಸಿಪಿಐ (ಮಾವೋವಾದಿ) ಸಂಘಟನೆಯ ಸಹದೇವ್ ಸೊರೆನ್ ತಂಡವನ್ನು ಗುರಿಯಾಗಿಸಿ ಈ ಎನ್​ಕೌಂಟರ್ ನಡೆಸಿದ್ದು, ಸದ್ಯ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಜಾರ್ಖಂಡ್‌ನಲ್ಲಿ ಸಿಆರ್‌ಪಿಎಫ್ ಮತ್ತು ರಾಜ್ಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ₹1 ಕೋಟಿ ಬಹುಮಾನ ನಿಗದಿಯಾಗಿದ್ದ ಸಹದೇವ್ ಸೊರೆನ್ ಸೇರಿದಂತೆ ಮೂವರು ಪ್ರಮುಖ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಎನ್‌ಕೌಂಟರ್ ಹಜಾರಿಬಾಗ್‌ನ ಗೋರ್ಹಾರ್ ಪ್ರದೇಶದ ಪಂಟಿತ್ರಿ ಅರಣ್ಯದಲ್ಲಿ ಮುಂಜಾನೆ 4.20ರ ಸುಮಾರಿಗೆ ನಡೆದಿದೆ. ಹತರಾದ ಇತರ ನಕ್ಸಲರಾದ ರಘುನಾಥ್ ಹೆಂಬ್ರಾಮ್ ಮತ್ತು ವೀರ್ಸೆನ್ ಗಂಜು ಬಗ್ಗೆಯೂ ಕ್ರಮವಾಗಿ ₹25 ಲಕ್ಷ ಮತ್ತು ₹10 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಮೂರು ಎಕೆ-47 ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಆರ್‌ಪಿಎಫ್ ತಿಳಿಸಿದೆ.

2025ರಲ್ಲಿ 209 ಕೋಬ್ರಾ ಕಮಾಂಡೋಗಳು ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ಗಮನಾರ್ಹ ಯಶಸ್ಸು ಸಾಧಿಸಿವೆ. ಈ ಕಾರ್ಯಾಚರಣೆಯಲ್ಲಿ ಇದುವರೆಗೆ 20 ಪ್ರಮುಖ ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಮೃತಪಟ್ಟವರಲ್ಲಿ ಇಬ್ಬರು ಕೇಂದ್ರ ಸಮಿತಿ ಸದಸ್ಯರು, ಇಬ್ಬರು ಬಿಜೆಎಸ್ಎಸಿ ಸದಸ್ಯರು, ನಾಲ್ವರು ವಲಯ ಸಮಿತಿ ಸದಸ್ಯರು, ಇಬ್ಬರು ಉಪ-ವಲಯ ಸಮಿತಿ ಸದಸ್ಯರು, ಮೂವರು ಪ್ರದೇಶ ಸಮಿತಿ ಸದಸ್ಯರು, ಹಾಗೂ ಇತರ ಹಲವು ನಕ್ಸಲ್ ಕಾರ್ಯಕರ್ತರು ಸೇರಿದ್ದಾರೆ.

ಇದನ್ನು ಓದಿ : ‘ತಲೆಬುರುಡೆ’ ಯಿಂದ ಹೊಸ ತಿರುವು: ಸೌಜನ್ಯಾ ಪ್ರಕರಣದಲ್ಲಿ ಮಾಟ-ಮಂತ್ರದ ನಂಟು? ಎಸ್.ಐ.ಟಿ ತನಿಖೆ

Leave a Reply

Your email address will not be published. Required fields are marked *