Wed. Sep 17th, 2025

ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸುಬ್ರಹ್ಮಣ್ಯ ಮಠದ ಸ್ವಾಮೀಜಿ ಭೇಟಿ

ಧರ್ಮಸ್ಥಳ : ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಸೆ.16 ರಂದು ಧರ್ಮಸ್ಥಳಕ್ಕೆ ಆಗಮಿಸಿದರು. ಅವರನ್ನು ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು. ಹೆಗ್ಗಡೆಯವರ ಬೀಡಿನಲ್ಲಿ ಸ್ವಾಮೀಜಿಯವರ ಪಾದಪೂಜೆ ನಡೆಸಿ ಗೌರವಿಸಲಾಯಿತು.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಮೀಜಿಯವರಿಗೆ ಮಾಲಾರ್ಪಣೆ ಮಾಡಿ, ಶಾಲು ಹೊದಿಸಿ, ಫಲಕಾಣಿಕೆ ನೀಡಿ ಗೌರವಿಸಿದರು. ಸ್ವಾಮೀಜಿಯವರು ಹೆಗ್ಗಡೆಯವರಿಗೆ ಸುಬ್ರಹ್ಮಣ್ಯದ ಪ್ರಸಾದ ನೀಡಿ ಶುಭ ಹಾರೈಸಿದರು. ಹೇಮಾವತಿ ವಿ. ಹೆಗ್ಗಡೆ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *