ಕಲ್ಮಂಜ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಬೈಲು ಪರಾರಿ ಶಾಲೆಯ ಹಳೆ ವಿದ್ಯಾರ್ಥಿ ಸಂಘ ರಚನೆ ಮಾಡಲಾಯಿತು.

ಅಧ್ಯಕ್ಷರಾಗಿ ಗುರುರಾಜ್ ಆರ್. , ಉಪಾಧ್ಯಕ್ಷರಾಗಿ ಲೋಕೇಶ್, ಕಾರ್ಯದರ್ಶಿಯಾಗಿ ಅನಿಲ್ ಮದ್ಮಲ್ಕಟ್ಟೆ ಹಾಗೂ ಶ್ರೀಮತಿ ಪವಿತ್ರ, ಕೋಶಾಧಿಕಾರಿಯಗಿ ರವಿಕಿಶನ್ ಒಂಜರೆಬೈಲು, ಗೌರವ ಸಲಹಗಾರರಾಗಿ ಶ್ರೀನಿವಾಸ ರಾವ್ ಕಲ್ಮಂಜ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಶಾಲಾ ಸ್ಥಾಪಕರಾದ ವೆಂಕಟರಮಣ ಹೆಬ್ಬಾರ್, ಶ್ರೀನಿವಾಸ ರಾವ್ ಕಲ್ಮಂಜ, ಶಾಲಾ ಮುಖ್ಯೋಪಾಧ್ಯರಾದ ಶ್ರೀಮತಿ ಧರ್ಣಮ್ಮ, ಶಾಲೆಯ ಎಸ್.ಡಿ.ಎಂ.ಸಿ. ಅದ್ಯಕ್ಷರಾದ ದಿನೇಶ್ ಗೌಡ ಬನದಬೈಲು, ಶಾಲಾಭಿವೃದ್ದಿ ಸಮಿತಿ ಸದಸ್ಯರು, ಗ್ರಾಮ ಪಂಚಾಯತ್ ಸದಸ್ಯರಾದ ಪ್ರವೀಣ್ ಕರಿಯನೆಲ, ಅಂಗನವಾಡಿ ಶಿಕ್ಷಕಿಯಾದ ಶ್ರೀಮತಿ ವಸಂತಿ, ಶಾಲೆಯ ಶಿಕ್ಷಕಿಯರು ಹಾಗೂ ಹಳೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.




