ಉಜಿರೆ:(ಸೆ.19) ಧರ್ಮಸ್ಥಳದಲ್ಲಿ ತಾಲೂಕು ಮಟ್ಟದ ಸತ್ಯದರ್ಶನ ಸಮಾವೇಶ ಮತ್ತು ಮಹಾ ಚಂಡಿಕಾ ಯಾಗವು ಸೆ.28 ರಂದು ಧರ್ಮಸ್ಥಳದಲ್ಲಿ ನಡೆಯಲಿದೆ ಎಂದು ಎಸ್ ಡಿ ಎಂ ಐ ಟಿ ವಿಭಾಗದ ಸಿ ಇ ಓ ಪೂರನ್ ವರ್ಮಾ ಹೇಳಿದರು.

ಅವರು ಸೆ 17 ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ನಡೆದ ತಾಲೂಕಿನ ಎಲ್ಲ ಸಂಘಟನೆಗಳು ಹಾಗೂ ಭಕ್ತವರ್ಗದ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದರು. ತಾಲೂಕಿನ ಎಲ್ಲ ಭಕ್ತಾದಿಗಳು ಶ್ರೀ ಕ್ಷೇತ್ರದ ಮುಖ್ಯ ದ್ವಾರದಿಂದ ಬೆಳಿಗ್ಗೆ 10ಕ್ಕೆ ಕ್ಷೇತ್ರಕ್ಕೆ ತೆರಳಿ ಪ್ರಾರ್ಥಿಸಿ, ಬಳಿಕ ಮಹಾ ಚಂಡಿಕಾ ಯಾಗದ ಪೂರ್ಣಾಹುತಿ ಹಾಗೂ ಖಾವಂದರ ಆಶೀರ್ವಚನದಲ್ಲಿ ಭಾಗವಹಿಸುವಂತೆ ತಿಳಿಸಿದರು.
ವೇದಿಕೆಯಲ್ಲಿ ಶ್ಯಾಮಸುಂದರ ನಡ ಉಪಸ್ಥಿತರಿದ್ದರು.ಸಮಾಲೋಚನಾ ಸಭೆಯಲ್ಲಿ ತಾಲೂಕಿನ ವಿವಿಧ ಸಂಘಟನೆಗಳ ಪ್ರಮುಖರು, ಕ್ಷೇತ್ರದ ಭಕ್ತ ವರ್ಗ,ವರ್ತಕರು,ಯೋಜನೆಯ ಕಾರ್ಯಕರ್ತರು, ವೈದ್ಯರು,ಮಹಿಳೆಯರು ಭಾಗವಹಿಸಿ ಸಲಹೆ, ಸೂಚನೆ,ಅಭಿಪ್ರಾಯ ಮಂಡಿಸಿದರು. ಸೋಮಶೇಖರ ಶೆಟ್ಟಿ ಸ್ವಾಗತಿಸಿ, ಯೋಜನೆಯ ರಾಮಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.



