ಬೆಳ್ತಂಗಡಿ : ಮಹೇಶ್ ಶೆಟ್ಟಿ ಮನೆಯಲ್ಲಿ ಎಸ್.ಐ.ಟಿ ಶೋಧದ ವೇಳೆ ಆಗಸ್ಟ್ 26 ರಂದು ತಲವಾರು ಮತ್ತು ಒಂದು ಬಂದೂಕು ಪತ್ತೆಯಾದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸೆ.16 ರಂದು ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ⭕ಬಂಟ್ವಾಳ: ನೀರು ತುಂಬಿದ್ದ ಹೊಂಡಕ್ಕೆ ಕಾಲುಜಾರಿ ಬಿದ್ದು ಯುವಕ ಸಾವು
ಈ ಸಂಬಂಧ ವಿಚಾರಣೆಗೆ ಹಾಜರಾಗಲು ಬೆಳ್ತಂಗಡಿ ಪೊಲೀಸರು ಸೆ.19 ರಂದು ಮನೆಗೆ ತೆರಳಿದಾಗ ತಿಮರೋಡಿ ಮಹೇಶ್ ಶೆಟ್ಟಿ ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿದ್ದರು. ಬಳಿಕ ಪೊಲೀಸರು ಗೋಡೆಗೆ ಸೆ.21 ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಅಂಟಿಸಿ ಬಂದಿದ್ದರು. ಆದ್ರೆ ಮಹೇಶ್ ಶೆಟ್ಟಿ ತಿಮರೋಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಸೆ.21 ರಂದು ಹಾಜರಾಗಲು ಅಸಾಧ್ಯ ಮುಂದಿನ ದಿನಗಳಲ್ಲಿ ಬರುವುದಾಗಿ ಆಪ್ತರ ಮೂಲಕ ತನಿಖಾಧಿಕಾರಿಗೆ ಮನವಿ ಪತ್ರ ನೀಡಿದ್ದರು.

ವಿಚಾರಣೆಗೆ ಸೆ.21 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಸೆ.25 ರಂದು ತನಿಖೆಗೆ ಹಾಜರಾಗಲು ಮತ್ತೆ ನೋಟೀಸ್ ತಿಮರೋಡಿ ಮನೆಯ ಗೋಡೆಗೆ ಅಂಟಿಸಿ ಜಾರಿ ಮಾಡಿದ್ದಾರೆ.


