ಮಾಲಾಡಿ: ಭಾರತದ ಪ್ರಧಾನ ಮಂತ್ರಿ ನಮ್ಮೆಲ್ಲರ ನೆಚ್ಚಿನ ಶ್ರೀ ನರೇಂದ್ರ ಮೋದಿಜೀಯವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಸೇವಾ ಪಾಕ್ಷಿಕದ ಭಾಗವಾಗಿ ಮಾಲಾಡಿ ಬಿಜೆಪಿ ಬೆಂಬಲಿತರೂ, ಮೋದಿ ಅಭಿಮಾನಿಗಳ ಸಹಕಾರದೊಂದಿಗೆ ,ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ

ಇದನ್ನೂ ಓದಿ: 🌸ಧರ್ಮಸ್ಥಳ: ಧರ್ಮಸ್ಥಳದಲ್ಲಿ 27 ನೇ ವರ್ಷದ ಭಜನಾ ಕಮ್ಮಟ ಸಂಪನ್ನ
ಅಮೃತ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಕಚೇರಿಗೆ ಮಾಲಾಡಿ ಸೆಪ್ಟೆಂಬರ್ 21 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಬೇಡಿಕೆಯ ಸೀಲಿಂಗ್ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾದ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ತುಳಸಿ ಉಮೇಶ್ ಮತ್ತು ಪಂಚಾಯತ್ ಸದಸ್ಯರಾದ ಶ್ರೀಮತಿ ಜಯಂತಿ, ಒಕ್ಕೂಟದ ಅಧ್ಯಕ್ಷರು, ಪಂಚಾಯತ್ ಉಪಾಧ್ಯಕ್ಷರು ಒಕ್ಕೂಟ ಕಾರ್ಯದರ್ಶಿ , ಪದಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


