ಬೆಳ್ತಂಗಡಿ: ಶ್ರೀ ಚಾಮುಂಡೇಶ್ವರೀ ಕ್ಷೇತ್ರ ಆರಿಕೋಡಿ ಇಲ್ಲಿಯ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಇವರ ಶುಭಾಶೀರ್ವಾದದೊಂದಿಗೆ ಪ್ರಶಸ್ತಿ ವಿಜೇತ ಮಂದಾರ ಕಲಾವಿದರು ಉಜಿರೆ ಅಭಿನಯಿಸುವ ತುಳು ರಂಗಭೂಮಿಯಲ್ಲಿ ಕಲಾಭಿಮಾನಿಗಳಿಂದ ಪ್ರಶಂಸಿಸಲ್ಪಟ್ಟ ಸೂಪರ್‌ಹಿಟ್ ನಾಟಕ, ತುಳು ಭಕ್ತಿ ಪ್ರಧಾನ ಹಾಸ್ಯಮಯ ನಾಟಕ ಮಾಯೊದ ತುಡರ್ ಸೆಪ್ಟೆಂಬರ್ 28 ರಂದು ಮಂಗಳೂರು ಪುರಭವನದಲ್ಲಿ ಸಂಜೆ 6:00ಕ್ಕೆ ನಡೆಯಲಿದೆ.

ಇದನ್ನೂ ಓದಿ: 🔴ಉಜಿರೆ: ಸೆ.23 ರಂದು ಉಜಿರೆಯ ಅತ್ತಾಜೆಯಲ್ಲಿ ಸ್ವಚ್ಛೋತ್ಸವ ಬೃಹತ್ ಸ್ವಚ್ಛತಾ ಅಭಿಯಾನ
ತುಳು ಭಕ್ತಿ ಪ್ರಧಾನ ಹಾಸ್ಯಮಯ ನಾಟಕದ ನಿರ್ದೇಶನವನ್ನು “ರಂಗ್ ದ ರಾಜೆ” Ln. ಸುಂದರ್ ರೈ ಮಂದಾರ, ಸಲಹೆ ಸಹಕಾರ ‘ಕುಸಲ್ದರಸೆ’ ನವೀನ್ ಡಿ. ಪಡೀಲ್, ಕಥೆ-ಸಂಭಾಷಣೆ-ಸಾರಥ್ಯ ಗುಣಪಾಲ್ M.S. ಉಜಿರೆ, ಸಂಚಾಲಕ ಪ್ರವೀಣ್ ಉಜಿರೆ, ಸಂಗೀತ ‘ಸಂಗೀತರತ್ನ’ ಶ್ರೇಯಸ್ ಕಲ್ಲಡ್ಕ,
ಸಮಗ್ರ ನಿರ್ವಹಣೆ ಶ್ರೀಮತಿ ಚೇತನಾ ಗುಣಪಾಲ್ , ಶಬ್ದ ಮತ್ತು ಬೆಳಕು ಸಂಗಮ್ ಸೌಂಡ್ಸ್ & ಲೈಟಿಂಗ್ಸ್, ಉಪ್ಪಿನಂಗಡಿ, ತಾಂತ್ರಿಕ ನಿರ್ವಹಣೆ ನವೀನ್ ಕುಮಾರ್ ಮುಂಡಾಜೆ, ರಾಕೇಶ್ ಪೂಜಾರಿ ಮುಂಡಾಜೆ , ಸಲಹೆ ರಂಜು ತುಳುರಂಗ ಪ್ರೇಮಿ, ವಿನೋದ್ ಚಾರ್ಮಾಡಿ ಇವರದ್ದಾಗಿದೆ.



