ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಯಲ್ಲಿ ಕಬ್, ಬುಲ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಗೆ ದ್ವಿತೀಯ ಚರಣ/ ಗರಿ/ ಸೋಪಾನ ಪರೀಕ್ಷೆ ಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಯಲ್ಲಿ ನಡೆಯಿತು.

ಸುಮಾರು 420 ಕಬ್, ಬುಲ್ ಬುಲ್ಸ್, ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಕಾರ್ಯಕ್ರಮ ದಲ್ಲಿ ಭಾಗವಹಿಸಿರುತ್ತಾರೆ. ಸ್ಥಳೀಯ ಸಂಸ್ದೆಯ ಕಾರ್ಯದರ್ಶಿ ಪ್ರಮೀಳಾ ಕಾರ್ಯಕ್ರಮವನ್ನು ಸಂಘಟಿಸಿದರು.
ಪರೀಕ್ಷಾ ಶಿಬಿರದಲ್ಲಿ ಸಂತ ತೆರೇಸಾ ವಿನ್ಸೆಂಟ್ ಸಿಕ್ವೇರಾ , ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಪ್ರಮೀಳಾ ಎನ್, ಗೀತಾ, ನಯನ, ಸೌಮ್ಯ, ಸೈಂಟ್ ಮೇರಿಸ್ ಶಾಲೆಯ ಸಂಧ್ಯಾ, ಸುದರ್ಶನ್ ಕೆ, ಎಸ್ ಡಿಎಂ (ಸಿ ಬಿ ಎಸ್ ಸಿ )ಉಜಿರೆಯ ಗೀತಾ, ನಯನ, ಮಾಲಿನಿ, ರವಿನ ಪಿರೇರ, ಸಂಗೀತ ದೇಸಾಯಿ, ಸವಿತಾ,

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ರಾಜ್ಯ ಪಠ್ಯಕ್ರಮ) ಉಜಿರೆ ಯ ನಿರೀಕ್ಷಾ ಡಿಪಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳದ ಹೇಮಾವತಿ ಜೈನ್, ಸೌಮ್ಯ ಎಂ, ದೀಕ್ಷಾ ಎಂ, ಜ್ಯೋತಿ ಲಕ್ಷ್ಮಿ ಎ ವಿ, ವಾಣಿ ವಿದ್ಯಾ ಸಂಸ್ಥೆಯ ಸುಮಾಲತಾ ಎ, ನಮಿತಾ, ಸುದೀಪ್ ಡಿ, ಕೊಕ್ಕಡ ಸರಕಾರಿ ಪ್ರೌಢಶಾಲೆಯ ನೇತ್ರಾವತಿ ಇವರಗಳ ಸಹ ಬಾಗಿತ್ವದಲ್ಲಿ ಸ್ಥಳೀಯ ಸಂಸ್ಥೆಯಿಂದ ನಡೆದ ಪರೀಕ್ಷೆಯು ಯಶಸ್ವಿಯನ್ನು ಕಂಡಿದೆ.


