ತೆಂಕಕಾರಂದೂರು : ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ದಲ್ಲಿ ಗುರುಗಳಾದ ಸಂದೇಶ್ ಮದ್ದಡ್ಕ ಇವರ ತರಬೇತಿ ಯಲ್ಲಿ ಕಳೆದ 9 ತಿಂಗಳಿಂದ ತರಬೇತಿ ಪಡೆಯುತ್ತಿರುವ ಸುಮಾರು 30 ಸದಸ್ಯರು ಗಳಿರುವ ಈ ತಂಡದ ತಾಲೂಕಿನ ಇತರ ಕಡೆ 10ಕ್ಕೂ ಹೆಚ್ಚು ಭಜನಾ ಕಮ್ಮಟ ಗಳಲ್ಲಿ ಭಜನಾ ಸೇವೆ ನೀಡುತ್ತಾ ಬಂದಿರುತ್ತಾರೆ.

ಇದನ್ನೂ ಓದಿ: 🔴ಬೆಳಾಲು: ಕೆಸರುಗದ್ದೆ ಕ್ರೀಡಾಕೂಟದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಕ್ಕಳ ಕುಣಿತ ಭಜನಾತಂಡ ದ ಮಕ್ಕಳಿಗೆ ವಿವಿಧ ದಾನಿ ಗಳ, ಹಾಗು ಮಕ್ಕಳ ಪೋಷಕರ ಸಹಕಾರ ದಲ್ಲಿ ಸಮವಸ್ತ್ರ ಹಾಗು ಭಜನಾ ಮಂಡಳಿ ಯ ವತಿಯಿಂದ ತಾಳವನ್ನು ವಿಷ್ಣು ಮೂರ್ತಿ ದೇವಸ್ಥಾನ ದ ಆಡಳಿತ ಮೋಕ್ತೆಸ ರಾದ ಶ್ರೀ ಕೃಷ್ಣ ಸಂಪಿಗೆ ತ್ತಾಯ ರವರ ಹಾಗು ಗಣ್ಯರ ಉಪಸ್ಥಿತಿ ಯಲ್ಲಿ ದಿ. 21-09-2025 ರಂದು ದೇವಾಲಯದ ವಠಾರ ದಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ವಿಷ್ಣು ಸಂಪಿಗೆತ್ತಾಯ, ಅರ್ಚಕರಾದ ಶಂಕರ ನಾರಾಯಣ ಭಟ್, ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಹೆಗ್ಡೆ, ಜಾತ್ರೊತ್ಸವ ಸಮಿತಿ ಕಾರ್ಯದರ್ಶಿ ವಿದ್ಯಾನಂದ, , ಭಜನಾ ಮಂಡಳಿ ಅಧ್ಯಕ್ಷರಾದ ಹೇಮಂತ್ ಗುಂಡೇರಿ, ವರಮಹಾಲಕ್ಷ್ಮಿಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ರೂಪಲತಾ, ಭಜನಾ ಮಂಡಳಿ ಸದಸ್ಯರು ಗಳು, ಜಾತ್ರೊತ್ಸವ ಸಮಿತಿ ಸದಸ್ಯರು ಗಳು ಮಕ್ಕಳ ಪೋಷಕರು ಉಪಸ್ಥಿತರಿದ್ದರು, ಶ್ರೀಮತಿ ಅಶ್ವಿನಿ ಬಂದಂತಹ ಅತಿಥಿ ಗಣ್ಯರನ್ನು ಹಾಗು ಸಹಕರಿಸಿದ ಎಲ್ಲರನ್ನು ಸ್ವಾಗತಿಸಿ ಧನ್ಯವಾದವಿತ್ತರು.



