Tue. Oct 14th, 2025

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಾ ಮತ್ತು ಕರಕುಶಲ ಚಟುವಟಿಕೆ

ಉಜಿರೆ: ಅನುಗ್ರಹ ಶಾಲೆಯಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಕಲಾ ಮತ್ತು ಕರಕುಶಲ ಚಟುವಟಿಕೆ ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮವನ್ನು ಮಕ್ಕಳಲ್ಲಿ ಸೃಜನಶೀಲತೆ, ಹೊಸತನ ಮತ್ತು ಕಲೆಗಳ ಆಸಕ್ತಿಯನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾಯಿತು.


ಕಾರ್ಯಕ್ರಮಕ್ಕೆ ಭವ್ಯಶ್ರೀ ಕೀರ್ತಿರಾಜ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಕ್ಕಳಿಗೆ ಕಲಾ-ಕುಶಲತೆಯ ವಿವಿಧ ರೀತಿಗಳನ್ನು ಪರಿಚಯಿಸಿದರು. ಅವರ ಮಾರ್ಗದರ್ಶನದಲ್ಲಿ ಮಕ್ಕಳು ಉತ್ಸಾಹದಿಂದ ವಿವಿಧ ಹಸ್ತ ಕಲಾಕ್ರತಿಗಳನ್ನು ತಯಾರಿಸಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು.


ಈ ಕಾರ್ಯಕ್ರಮಕ್ಕೆ ಶಾಲಾ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ ಅವರು ಹಾಜರಾಗಿ ಮಕ್ಕಳಿಗೆ ತಮ್ಮ ಸಿಹಿನುಡಿಯಿಂದ ಪೋತ್ಸಾಹಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಶಿಕ್ಷಕಿಯರಾದ ಅಶ್ವಿನಿ ಹಾಗೂ ರಕ್ಷಾ ರವರು ನಿರ್ವಹಿಸಿದರು. ಮಕ್ಕಳ ಪಾಲ್ಗೊಳ್ಳುವಿಕೆ, ಉತ್ಸಾಹ ಮತ್ತು ಸೃಜನಶೀಲತೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು.

Leave a Reply

Your email address will not be published. Required fields are marked *