(ಸೆ.26) ಬೆಳ್ತಂಗಡಿ ಪೊಲೀಸರು ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸಂಬಂಧಿಸಿದ ಅಕ್ರಮ ತಲವಾರು ಮತ್ತು ಬಂದೂಕು ಪತ್ತೆ ಪ್ರಕರಣದಲ್ಲಿ ಮೂರನೇ ಮತ್ತು ಅಂತಿಮ ನೋಟೀಸ್ ಅನ್ನು ಜಾರಿ ಮಾಡಿದ್ದಾರೆ

ಪ್ರಕರಣ ದಾಖಲಾದ ನಂತರ ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡಿರುವ ತಿಮರೋಡಿ ಅವರು, ವಿಚಾರಣೆಗೆ ಹಾಜರಾಗಲು ನೀಡಲಾದ ಹಿಂದಿನ ನೋಟೀಸ್‌ಗಳಿಗೆ ಸ್ಪಂದಿಸಿಲ್ಲ. ಆದ್ದರಿಂದ, ಸೆಪ್ಟೆಂಬರ್ 26 ರಂದು ಪೊಲೀಸರು ಅವರ ಮನೆಯ ಗೋಡೆಗೆ ಸೆಪ್ಟೆಂಬರ್ 29 ರಂದು ವಿಚಾರಣೆಗೆ ಹಾಜರಾಗಲು ಸೂಚಿಸುವ ನೋಟೀಸ್ ಅಂಟಿಸಿದ್ದಾರೆ.

ಒಂದು ವೇಳೆ ಅವರು ಈ ಅಂತಿಮ ನೋಟೀಸ್‌ಗೂ ಹಾಜರಾಗದಿದ್ದರೆ, ಪೊಲೀಸರು ಅವರನ್ನು ಬಂಧಿಸಿ ಕರೆತಂದು ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ. ತಿಮರೋಡಿ ಅವರು ಈಗ ಬಂದೂಕು ಪ್ರಕರಣ ಮತ್ತು ಜಿಲ್ಲೆಯಿಂದ ಗಡಿಪಾರು ಆದೇಶದ ಕಾರಣದಿಂದ ಬೆಳ್ತಂಗಡಿ ಬಿಟ್ಟು ಪರಾರಿಯಾಗಿದ್ದಾರೆ.


