ಉಜಿರೆ: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಶಾಲಾ ಬಸ್ಸು ಚಾಲಕರಿಗೆ ಎಸ್.ಡಿ.ಎಂ ಎಜುಕೇಷನಲ್ ಸೊಸೈಟಿಯಿಂದ “ಸ್ಟೇರಿಂಗ್ ಟುವರ್ಡ್ಸ್ ಸೇಫ್ಟಿ” ಕಾರ್ಯಾಗಾರ ಆಯೋಜಿಸಲಾಗಿತ್ತು.

ಇದನ್ನೂ ಓದಿ: ⭕ಪುತ್ತೂರು: ಶ್ರೀಕೃಷ್ಣ- ಪೂಜಾ ಕೇಸಿಗೆ ಬಿಗ್ ಟ್ವಿಸ್ಟ್
ಬೆಳ್ತಂಗಡಿಯ ಸಂಚಾರ ಪೊಲೀಸ್ ಹಾಗೂ ಪಿ.ಎಸ್.ಐ ಶ್ರೀ ಅರ್ಜುನ್ ಹೆಚ್.ಕೆ ಕಾರ್ಯಕ್ರಮ ಉದ್ಘಾಟಿಸಿ ಚಾಲನೆಯಲ್ಲಿ ತಿಳಿದುಕೊಳ್ಳಬೇಕಾದ ನಿಯಮಗಳ ಕುರಿತು ಮಾಹಿತಿ ಹಂಚಿಕೊಂಡರು.
ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಸಾರಿಗೆ ಇಲಾಖೆ, ಘನ ವಾಹನ ಚಾಲಕರ ತರಬೇತಿ ಸಂಸ್ಥೆಯ ತರಬೇತುದಾರ ಶ್ರೀ ಭುಜಂಗ ಶೆಟ್ಟಿ ವಿಷಯದ ಕುರಿತಾಗಿ ದೃಶ್ಯ ಮಾಧ್ಯಮದ ಪ್ರಾತ್ಯಕ್ಷಿಕೆಯೊಂದಿಗೆ ಮಾಹಿತಿ ಹಂಚಿಕೊಂಡರು.
ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ಕಲ್ಯಾಣಿ ರಾವ್ ನಿರೂಪಿಸಿದ ಕಾರ್ಯಗಾರದಲ್ಲಿ ಎಸ್.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.



