ಉಡುಪಿ: ಉಡುಪಿಯಲ್ಲಿ ಹಾಡಹಗಲೇ ಎಕೆಎಂಎಸ್ ಬಸ್ ಮಾಲೀಕ, ರೌಡಿಶೀಟರ್ ಸೈಫುದ್ದೀನ್ನನ್ನು ಮಲ್ಪೆ ಸಮೀಪದ ಕೊಡವೂರಿನ ಮನೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: 🔴ಉಜಿರೆ: ಉಜಿರೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಶಾಲಾ ಬಸ್ಸು ಚಾಲಕರಿಗೆ ಕಾರ್ಯಾಗಾರ
ಮಲ್ಪೆಯ ಕೊಡವೂರಿನ ಮನೆಯೊಂದರಲ್ಲಿ ಪಿಸ್ತೂಲ್ ನಿಂದ ಶೂಟ್ ಮಾಡಿ ಬಳಿಕ ತಲವಾರಿನಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ. ಸೈಫುದ್ದೀನ್‌ನ ಸಹಚರನೇ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಮಲ್ಪೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


