ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ ಇದರ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭರ್ಜರಿ ಜಯ ಸಾಧಿಸಿದೆ. ವಿದ್ಯಾರ್ಥಿಗಳ ಆಶಯ–ಅಭಿಪ್ರಾಯಗಳಿಗೆ ಸ್ಪಂದಿಸಿ, ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಅಭಿವೃದ್ಧಿ, ವಿದ್ಯಾರ್ಥಿ ಹಿತ ಹಾಗೂ ಕ್ಯಾಂಪಸ್‌ನಲ್ಲಿ ಶಿಸ್ತಿನ ವಾತಾವರಣ ಕಾಪಾಡುವ ಭರವಸೆ ನೀಡಿದ ಪರಿಣಾಮ ಎಬಿವಿಪಿಗೆ ವಿದ್ಯಾರ್ಥಿಗಳ ಅಪಾರ ಬೆಂಬಲ ದೊರಕಿದೆ.

https://www.facebook.com/share/v/1ZR7aXBndg
ಎಬಿವಿಪಿ ಕಾರ್ಯಕರ್ತರು ತಮ್ಮ ಸಮರ್ಪಿತ ಹೋರಾಟ, ನಿಷ್ಠೆ ಹಾಗೂ ವಿದ್ಯಾರ್ಥಿ ಹಿತದ ಚಟುವಟಿಕೆಗಳಿಂದ ವಿಶ್ವವಿದ್ಯಾಲಯದಲ್ಲಿ ಭರವಸೆಯ ಹೆಸರಾಗಿದ್ದಾರೆ. ಈ ಗೆಲುವು ಯುವ ಶಕ್ತಿಯ ಏಕತೆಯ ಹಾಗೂ ಸಕಾರಾತ್ಮಕ ಹೋರಾಟದ ಸಂಕೇತವಾಗಿದೆ.

ಈ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಬಲಿತ ಅಭ್ಯರ್ಥಿಗಳಾದ ಕಾರ್ತಿಕ್ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಕೃಷ್ಣ, ಸಹಕಾರ್ಯದರ್ಶಿಯಾಗಿ ನಿಧಿ, ಲಲಿತಾ ಕಲಾ ಕಾರ್ಯದರ್ಶಿಯಾಗಿ ಸುಪ್ರಿತಾ ಬೇಕಲ್, ಸಹ ಲಲಿತಾ ಕಲಾ ಕಾರ್ಯದರ್ಶಿಯಾಗಿ ಶಿವಾನಿ ಚುನಾಯಿತರಾದರು.


