ಬೆಳ್ತಂಗಡಿ: ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿ ಡೊಂಬಿವಿಲಿ ಮುಂಬೈ ಇದರ 61 ನೇ ವರ್ಷದ ಶಾರದೋತ್ಸವದ ಭವ್ಯ ಶೋಭಯಾತ್ರೆಯು ಅಕ್ಟೋಬರ್ 2 ರಂದು ನಡೆಯಲಿದ್ದು, ಈ ಶೋಭಯಾತ್ರೆಯಲ್ಲಿ ಕುಣಿತ ಭಜನೆ, ಜಡೆ ಕೋಲಾಟ,

ಇದನ್ನೂ ಓದಿ: ⭕ಉಚ್ಚಿಲ: ಬೈಕ್ ಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ
ಕಂಸಾಲೆ ನೃತ್ಯ ಪ್ರದರ್ಶನ ನೀಡಲು ಭಕ್ತಿ ಹೆಜ್ಜೆ ಬಳಗಕ್ಕೆ ಪ್ರಾಯೋಜಕತ್ವ ನೀಡಿ ಸಮಿತಿಯವರು ಆಹ್ವಾನ ನೀಡಿದ್ದು ಇದರಂತೆ ಕುಣಿತ ಭಜನಾ ಗುರುಗಳು ಮತ್ತು ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಯ ಸಂಚಾಲಕರಾದ ವಿ ಹರೀಶ್ ನೆರಿಯ ಸಾರಥ್ಯದಲ್ಲಿ ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಯ 62 ಭಜಕ ಸದಸ್ಯರು ಮುಂಬೈ ಗೆ ತೆರಳುತ್ತಿದ್ದಾರೆ.

ಭಕ್ತಿ ಹೆಜ್ಜೆ ಬಳಗ ಬೆಳ್ತಂಗಡಿ ಯ ಭಜಕರು ಅಕ್ಟೋಬರ್ 2 ರಂದು ಶಾರದೋತ್ಸವದ ಶೋಭಯಾತ್ರೆ, ಅಕ್ಟೋಬರ್ 3 ರಂದು ನಿತ್ಯಾ ನಂದ ಮಂದಿರ ಗಣೇಶ್ ಪುರಿ ಮುಂಬೈ ಹಾಗೂ ಮಹಾಲಕ್ಷ್ಮಿ ದೇವಸ್ಥಾನ ಘನ್ಸೋಲಿ ಮುಂಬೈ ಯಲ್ಲಿ ಕುಣಿತ ಭಜನಾ ಸೇವೆ ನೀಡಿ ಅಕ್ಟೋಬರ್ 4 ರಂದು ಮುಂಬೈ ಯ ಪ್ರಸಿದ್ದ ಪ್ರವಾಸಿ ತಾಣ ಗಳಿಗೆ ಭೇಟಿ ನೀಡಲಿದ್ದಾರೆ.


