ಬಳಂಜ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಒಟ್ಟುಗೂಡಿಸಿ ಎರಡು ಕುಟುಂಬಗಳಿಗೆ ರೂ 46 ಸಾವಿರ ಆರ್ಥಿಕ ನೆರವು ನೀಡಲಾಯಿತು.

ಬಳಂಜ ಗ್ರಾಮದ ಬಿರ್ಮನೊಟ್ಟು ನಿವಾಸಿ ಶಿವಾನಂದ ಅವರು ಬ್ರೈನ್ ಎಮರೇಜ್ ನಿಂದ ನಿಧನರಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು ಅವರ ಕುಟುಂಬಕ್ಕೆ ರೂ 30 ಸಾವಿರ ಹಾಗೂ ಕಾಪಿನಡ್ಕ ಗಾಂಧೀನಗರ ನಿವಾಸಿ ಮೀನಾಕ್ಷಿಯವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವರ ವೈದ್ಯಕೀಯ ಚಿಕಿತ್ಸೆಗೆ ರೂ 16 ಸಾವಿರವನ್ನು ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಪ್ರವೀಣ್ ಕುಮಾರ್ ಹೆಚ್ ಎಸ್,ಸಂತೋಷ್ ಕುಮಾರ್ ಕಾಪಿನಡ್ಕ, ರಂಜಿತ್ ಪೂಜಾರಿ ಮಜಲಡ್ಡ, ಕೃಷ್ಣಪ್ಪ ಪೂಜಾರಿ ಬೊಂಟ್ರೋಟ್ಟು, ಶರತ್ ಅಂಚನ್ ಬಾಕ್ಯರಡ್ಡ,ಜಗದೀಶ್ ಪೂಜಾರಿ ಬಳ್ಳಿದಡ್ಡ,ಯೋಗೀಶ್ ಪೂಜಾರಿ ಕೊಂಗುಳ,ಪ್ರವೀಣ್ ಡಿ ಕೋಟ್ಯಾನ್, ಸಂಪತ್ ಪಿ ಕೋಟ್ಯಾನ್, ಮುತ್ತಪ್ಪ ಪೂಜಾರಿ ಗಾಂಧಿನಗರ ಉಪಸ್ಥಿತರಿದ್ದರು.



