Tue. Oct 14th, 2025

Bengaluru: ಓಯೋ ರೂಂ ಗೆಳೆಯ, ಮನಸ್ಸು ಕೆಡಿಸಿತ್ತು ಪ್ರಾಯ – ಆಮೇಲೆ ನಡೆದಿದ್ದು ದುರಂತ..!

ಬೆಂಗಳೂರು: ಗಂಡು ಹೆಣ್ಣಿನ ಜಾತಕ ಜಾಲಾಡಿ ಮದ್ವೆ ಮಾಡ್ತಾರೆ. ಒಳ್ಳೆ ಮುಹೂರ್ತದಲ್ಲೇ ಗುರುಹಿರಿಯರ ನಿಶ್ಚಯದಲ್ಲೇ ಸಪ್ತಪದಿ ತುಳೀತಾರೆ. ನೂರು ಕಾಲ ಗಂಡ ಹೆಂಡ್ತಿ ಖುಷಿ ಖುಷಿಯಾಗಿರಲಿ ಅಂತಾ ಬಂದು ಬಳಗ ಎಲ್ಲಾ ಶುಭ ಹಾರೈಸಿ ಹೋಗ್ತಾರೆ. ಆದ್ರೆ, ಅದೆಷ್ಟು ಜನ ಖುಷಿಯಾಗಿರ್ತಾರೋ ದೇವ್ರೇ ಬಲ್ಲ.

ಇದನ್ನೂ ಓದಿ: ⭕Bengaluru: ಬೆಡ್ ​​ರೂಮ್ ​​ನಲ್ಲಿ ಕ್ಯಾಮೆರಾ ಇಟ್ಟ ಕೇಸ್ ​ಗೆ ಬಿಗ್ ಟ್ವಿಸ್ಟ್

ಮೋಬೈಲ್‌ ಅನ್ನೋ ಮಾಯೆಯೋ, ಅಥವಾ ಈ ಸೋಷಿಯಲ್‌‌ ಮೀಡಿಯಾ ಜಮಾನದ ಅವಾಂತರವೋ ಗೊತ್ತಿಲ್ಲ. ಗಂಡ ಹೆಂಡ್ತಿ ಅನ್ನೋ ಸಂಬಂಧಕ್ಕೆ ಎಳ್ಳುನೀರು ಬಿಡೋರೇ ಜಾಸ್ತಿ ಆಗೋದಿದ್ದಾರೆ. ಗಂಡ-ಮಕ್ಕಳು ಇದ್ರೂ ಇನ್ನೊಬ್ಬನ ಸಂಗ ಬೆಳೆಸ್ತಾರೆ. ಸಂಸಾರದ ಸುಖ ಅನುಭವಿಸೋದು ಬಿಟ್ಟು, ಪರಪುರುಷ ಸುಖದಲ್ಲಿ ತೇಲಾಡ್ತಾರೆ. ಕೊನೆಗೆ ತಾಳಿ ಕಟ್ಟಿದವ್ನಿಗಿಂತ ಸೋಷಿಯಲ್‌ ಮೀಡಿಯಾದಲ್ಲಿ ಪರಿಚಯ ಆದವ್ನೇ ಮೇಲು ಅಂತಾ ಪ್ರಾಣವನ್ನೂ ಬಿಡ್ತಾರೆ. ಈ ಹೆಣ್ಮಗಳದ್ದೂ ಕೂಡಾ ಇದೇ ಕಥೆ. ಪ್ರಿಯರಕರ ಪ್ರೇಮದ ಬಲೆಗೆ ಬಿದ್ದವ್ಳು, ಈತನ ಕಾಮ ಪುರಾಣ ಕಂಡು ಓಯೋ ರೂಂನಲ್ಲೇ ನೇಣಿಗೆ ಕೊರಳೊಡ್ಡಿದ್ದಾಳೆ.

ಆಂಟಿ ಸ್ನೇಹಿತೆ, ಅಂಕಲ್‌ಗೆ ಬೀಸಿದ್ದಳು ಬಲೆ!
ಇವ್ರ ಕಥೆಯನ್ನ ಪ್ರೀತಿ ಅನ್ಬೇಕೋ, ಪ್ರೇಮ ಅನ್ಬೇಕೋ. ಅಥವಾ ಪ್ರೀತಿ ಹೆಸರಲ್ಲಿ ಆಡ್ತಿದ್ದ ಕಾಮದ ಕಳ್ಳಾಟ ಅನ್ಬೇಕೋ ಒಂದೂ ಗೊತ್ತಾಕ್ತಿಲ್ಲ. ಏಕೆಂದರೆ, ಪರಿಶುದ್ಧ ಪ್ರೀತಿ ಅನ್ನೋದಕ್ಕೆ ಮದ್ವೆಯಾಗಿ ಎರಡು ಮಕ್ಕಳಿದ್ದಾರೆ. ಸ್ನೇಹ ಅನ್ನೋದಕ್ಕೆ, ಸ್ನೇಹವನ್ನೂ ಮೀರಿದ್ದ ಸಂಬಂಧ ಬೆಸೆದುಕೊಂಡಿತ್ತು. ಇದೇ ಈಗ ಈ ಹೆಣ್ಮಗಳ ಜೀವಕ್ಕೆ ಕಂಟಕವಾಗಿದೆ. ಪ್ರಿಯಕರ ಅನಿಸಿಕೊಂಡವ, ಆಂಟಿಯ ಸ್ನೇಹಿತೆಗೇ ಬಲೆ ಬೀಸಿ ಓಯೋ ರೂಂನಲ್ಲಿ ತಗ್ಲಾಕೊಂಡಿದ್ದಾನೆ.

Leave a Reply

Your email address will not be published. Required fields are marked *