ಬೆಳ್ತಂಗಡಿ:(ಅ.10) ನೇಣು ಬಿಗಿದುಕೊಂಡು ವ್ಯಕ್ತಿಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಣ್ಣೀರುಪಂತದಲ್ಲಿ ನಡೆದಿದೆ.

ಇದನ್ನೂ ಓದಿ: ಬೆಳ್ತಂಗಡಿ : ಐ ಲವ್ ಮಹಮ್ಮದ್ ಅಭಿಯಾನದ ನೆಪದಲ್ಲಿ ಹಿಂದೂಗಳ ಮೇಲೆ ನಡೆದ ಹಿಂಸಾತ್ಮಕ ದಾಳಿಗಳ ಕುರಿತು
ತಣ್ಣೀರುಪಂತ ಬಿಲ್ಲವ ಸಂಘದ ಸಕ್ರಿಯ ಸದಸ್ಯ, ತಣ್ಣೀರುಪಂತ ಶಾರದ ಉತ್ಸವ ಸಮಿತಿ ಅಧ್ಯಕ್ಷ ಅವಿವಾಹಿತ ಸಂತೋಷ್ ಕುಮಾರ್ ಅಳಕ್ಕೆ (40ವ) ನೇಣಿಗೆ ಶರಣಾದ ವ್ಯಕ್ತಿ.

ತಾಯಿ ಬಳಿ ಹತ್ತಿರದ ತೋಟದಿಂದ ತೆಂಗಿನಕಾಯಿ ತರಲು ಹೇಳಿದ ಸಂತೋಷ್ ಮನೆಯ ಗೋಡೆಯ ಅಡ್ಡ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಾರೆ ಕೆಲಸದ ವೃತ್ತಿ ನಡೆಸುತ್ತಿದ್ದ ಸಂತೋಷ್ ಆರೋಗ್ಯದ ಸಮಸ್ಯೆಯಿಂದ ಕೆಲ ದಿನಗಳಿಂದ ಬಳಲುತ್ತಿದ್ದರು, ಇದರಿಂದ ಮನನೊಂದು ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಾಯಿ, ಮತ್ತು ಸಹೋದರಿಯರನ್ನು ಅಗಲಿದ್ದಾರೆ.

