ಬೆಂಗಳೂರು (ಅ.11) : ‘ಬಿಗ್ ಬಾಸ್ ಕನ್ನಡ ಸೀಸನ್ 12’ ರ ಮನೆಯಲ್ಲಿ ಸ್ಪರ್ಧಿಗಳಾದ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಅವರ ಜೋಡಿ ಇದೀಗ ಹೊಸ ಕಾರಣಕ್ಕೆ ಸುದ್ದಿಯಲ್ಲಿದೆ. ಮನೆಯಲ್ಲಿ ಸಖತ್ ಎಂಟರ್‌ಟೈನರ್‌ಗಳಾಗಿ ಗುರುತಿಸಿಕೊಂಡಿರುವ ಈ ಜೋಡಿಯ ನಡುವೆ ನಡೆದ ತಮಾಷೆಯೊಂದು ವೈರಲ್ ಆಗಿದೆ.

ಇತ್ತೀಚೆಗೆ ನಡೆದ ಒಂದು ಘಟನೆಯಲ್ಲಿ, ಗಿಲ್ಲಿ ನಟ ಅವರು ಕಾವ್ಯಾ ಶೈವ ಅವರ ಕೈಗೆ ತಮಾಷೆಯಾಗಿ ತಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾವ್ಯಾ, “ನನಗೆ ಯಾಕೆ ಹೊಡೆದೆ? ಒಂದು ಏಟಿಗೆ ನಾನು ಮೂರು ಏಟನ್ನು ಮರಳಿ ಕೊಡುತ್ತೇನೆ” ಎಂದು ಸಿಟ್ಟಿನಂತೆ ನಟಿಸಿ ತಿರುಗೇಟು ನೀಡಿದ್ದಾರೆ.

ಆಗ ಗಿಲ್ಲಿ ನಟ, “ಒಂದು ಕೊಟ್ರೆ ಮೂರು ಕೊಡ್ತೀಯಾ?” ಎಂದು ಕೇಳುತ್ತಲೇ ಕಾವ್ಯಾ ಕಡೆಗೆ ಒಂದು ಫ್ಲೈಯಿಂಗ್ ಕಿಸ್ ನೀಡಿದರು. ತಕ್ಷಣ ಕಾವ್ಯಾ ಶೈವ, ಆ ಮುತ್ತಿಗೆ ಪ್ರತಿಯಾಗಿ ಮೂರು ಬಾರಿ ‘ಫೂ.. ಫೂ.. ಫೂ..’ ಎಂದು ಪ್ರತಿಕ್ರಿಯಿಸಿದ್ದು, ಈ ದೃಶ್ಯ ದೊಡ್ಮನೆಯಲ್ಲಿ ನಗೆಯುಕ್ಕಿಸಿದೆ.

ಈ ತಮಾಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಗಿಲ್ಲಿ ಮತ್ತು ಕಾವ್ಯಾ ಅವರ ಜೋಡಿ ಪ್ರೇಕ್ಷಕರನ್ನು ಯಶಸ್ವಿಯಾಗಿ ರಂಜಿಸುತ್ತಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

