Tue. Oct 14th, 2025

Mysuru: ಮೈಸೂರು ರೇ#​ ಆ್ಯಂಡ್ ಮರ್ಡ# ಕೇಸ್ – ಬಾಲಕಿಗೆ 19 ಬಾರಿ ಚುಚ್ಚಿದ್ನಾ ಕಾಮುಕ? – ಮರಣೋತ್ತರ ಪರೀಕ್ಷಾ ವರದಿಯಲ್ಲಿ ಕೊಲೆಯ ಭೀಕರತೆ ಬಯಲು

ಮೈಸೂರು (ಅ.11): ದಸರಾದಲ್ಲಿ ಬಲೂನ್‌ ಮಾರಾಟ ಮಾಡಲು ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ಪ್ರಕರಣಕ್ಕೆ

ಇದನ್ನೂ ಓದಿ: ⭕Davanagere : ದಾವಣಗೆರೆ ಪೊಲೀಸರಿಂದ ₹150 ಕೋಟಿ ಸೈಬರ್ ವಂಚಕರ ಜಾಲ ಭೇದ!

ಸಂಬಂಧಿಸಿದಂತೆ ಆರೋಪಿ ಕಾರ್ತಿಕ್​ ಎಂಬಾತನನ್ನು ಬಂಧಿಸಿಲಾಗಿದೆ. ಅಜ್ಜಿ ಜೊತೆ ಮಲಗಿದ್ದವಳನ್ನು ಕಿಡ್ನ್ಯಾಪ್ ಮಾಡಿದ್ದ ಕಾರ್ತಿಕ್​, ಕುಡಿದ ಮತ್ತಿನಲ್ಲಿ ಆಕೆಯ ಮೇಲೆ ಅತ್ಯಾಚಾರಗೈದು ಬಳಿಕ 19 ಬಾರಿ ಇರಿದು ಬಾಲಕಿಯನ್ನು ಕೊಂದಿದ್ದಾನೆ ಎಂದು ವರದಿ ಆಗಿದೆ.

ಮೈಸೂರಲ್ಲಿ ಒಂದೇ ವಾರಕ್ಕೆ ಎರಡು ಕೊಲೆಗಳಾಗಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಹೊಟ್ಟೆಪಾಡಿಗೆ ಬಲೂನು ಮಾರಿಕೊಂಡು ಜೀವನ ನಡೆಸ್ತಿದ್ದ ಬಾಲಕಿ ಮೇಲೆ ಎರಗಿದ ದುಷ್ಟ ಆಕೆ ಮೇಲೆ ಅತ್ಯಾಚಾರಗೈದು ಕೊಂದಿದ್ದ ಎನ್ನಲಾಗ್ತಿದೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯ ಭೀಕರತೆ ಬಯಲಾಗಿದೆ.

ಬಾಲಕಿಗೆ 19 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದಲ್ಲಿ 19 ಚಾಕು ಇರಿತದ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಜ್ಜಿ ಪಕ್ಕದಲ್ಲಿ ಮಲಗಿದ್ದವಳನ್ನು ಕಿಡ್ನ್ಯಾಪ್ ಮಾಡಿ ಹೊತ್ತೋಯ್ತಿದ್ದ ಕಾರ್ತಿಕ್​, ಕೊಲೆಗೈದು ಆಕೆ ವಾಸವಾಗಿದ್ದ ಟೆಂಟ್​ ಬಳಿಯೇ ಶವ ಬಿಸಾಡಿ ಪರಾರಿಯಾಗಿದ್ದ ಎಂದು ವರದಿ ಆಗಿದೆ.

ಕುಡಿದ ನಶೆಯಲ್ಲಿ ಕೃತ್ಯ:
ಮದ್ಯದ ನಶೆಯಲ್ಲಿಯೇ ಕಾರ್ತಿಕ್​ ಎಂಬಾತ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆಗೈದಿದ್ದಾನೆ ಎನ್ನಲಾಗ್ತಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ರೇಪಿಸ್ಟ್ ಕಾರ್ತಿಕ್ ಅತಿಯಾಗಿ ಮದ್ಯ ಸೇವನೆ ಮಾಡಿದ್ದ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *