Mon. Oct 13th, 2025

Bengaluru: ಆಂಟಿ ಹಿಂದೆ ಹೋದ ಯುವಕ ಸುಟ್ಟು ಕರಕಲಾದ – ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು?

ಬೆಂಗಳೂರು, (ಅ. 13): ಆಂಟಿ ಹಿಂದೆ ಹೋದ ಯುವಕ ಸುಟ್ಟು ಕರಕಲಾದ – ಅಸಲಿಗೆ ಅಲ್ಲಿ ನಡೆದಿದ್ದಾದ್ರೂ ಏನು?

ಇದನ್ನೂ ಓದಿ: ಬೆಳ್ತಂಗಡಿ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ

ಯಲಹಂಕ ಲಾಡ್ಜ್ ನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯಲ್ಲಿ ಪ್ರಿಯಕರ ರಮೇಶ್ ಸುಟ್ಟು ಕರಕಲಾಗಿದ್ರೆ, ಪ್ರಿಯತಮೆ ಲಾಡ್ಜ್ ಬಾತ್ ರೂಂ ನಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಳು. ಯಲಹಂಕ ನ್ಯೂ ಟೌನ್ ನಲ್ಲಿ ಮಹಿಳೆ ಯುವಕ ಸಾವು ಕೇಸ್ ಕೈಗೆತ್ತಿಕೊಂಡ ಪೊಲೀಸರಿಗೆ ಅವರಿಬ್ಬರ ಹೊರತಾಗಿ ಅದೇ ರೂಂ ನಲ್ಲಿ ಬೆಂಕಿ ಹೊತ್ತಿಕೊಳ್ಳುವ ಮುನ್ನ ಮತ್ತೋರ್ವ ಇದ್ದ ಎನ್ನುವುದು ಪಕ್ಕಾ ಆಗಿತ್ತು. ಈ ನಿಟ್ಟಿನಲ್ಲಿ ತನಿಖೆ ಕೈಗೊಂಡ ಪ್ರತ್ಯಕ್ಷ ದರ್ಶಿ ಪೊಲೀಸರ ಮುಂದೆ ಅಸಲಿ ವಿಚಾರ ಹೊರಹಾಕಿದ್ದಾನೆ. ಮೃತ ಮಹಿಳೆ ಚಿಕ್ಕಪ್ಪನ ಮಗ ಪ್ರಶಾಂತ್ ನನ್ನ ವಿಚಾರಣೆ ಮಾಡಿದ ಪೊಲೀಸರು, ಮೃತ ರಮೇಶ ಪೆಟ್ರೋಲ್ ಸುರಿದುಕೊಂಡು ಬೆಂಕಿ ಇಟ್ಟುಕೊಂಡಾಗ ಪಕ್ಕದಲ್ಲೇ ಇದ್ದಿದ್ದಾಗಿ ಹೇಳಿದ್ದಾನೆ.


ಲಾಡ್ಜ್ ಪಕ್ಕದಲ್ಲೇ ಹೋಗಿ ಒಂದು ಲೀಟರ್ ಪೆಟ್ರೋಲ್ ತಂದಿದ್ದ ಮೃತ ರಮೇಶ್, ಒಂದು ಲೀಟರ್ ಪೆಟ್ರೋಲ್ ನನ್ನ ಸಂಪೂರ್ಣವಾಗಿ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದನಂತೆ. ಪೆಟ್ರೋಲ್ ಸುರಿದುಕೊಳ್ಳುವಾಗ ಕೋಪದಲ್ಲಿ ಬೈದಿದ್ದ ಕಾವೇರಿಗೆ ಬೆದರಿಕೆ ಹಾಕಲು ಹೋಗಿ ಬೆಂಕಿ ಇಟ್ಟುಕೊಂಡು ಸುಟ್ಟು ಕರಕಲಾಗಿದ್ದ.ಮತ್ತೊಂದ್ಕಡೆ ಉಸಿರುಗಟ್ಟಿ ಮಹಿಳೆ ಕಾವೇರಿ ಸಾವನ್ನಪ್ಪಿದ್ದಳು.


ಮದುವೆಗೆ ನಿರಾಕರಿಸಿದ್ದೇ ಘಟನೆಗೆ ಕಾರಣ
ಮೂವರು ಮಕ್ಕಳಿದ್ದಾರೆಂದು ಇತ್ತೀಚೆಗೆ ಕಾವೇರಿ ರಮೇಶನನ್ನ ಅವೈಡ್ ಮಾಡ್ತಿದ್ದಳು,ಇದ್ರಿಂದ ಇಬ್ಬರ ನಡುವೆ ಒಂದು ವಾರದ ಹಿಂದೆ ಜಗಳವಾಗಿತ್ತು.ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್. ಇದೇ ಲಾಡ್ಜ್ ನ ರೂಂನಲ್ಲಿ ಸಂಜೆ ಐದು ಗಂಟೆ ವೇಳೆಗೆ ಮತ್ತೆ ಮಾತುಕತೆಗೆಂದು ಕಾವೇರಿ ಬಡಿಗೇರ್ ಮತ್ತು ರಮೇಶ್ ಸೇರಿದ್ದಾರೆ. ಈ ವೇಳೆ ಅದೇ ರೂಂ ಗೆ ಕಾವೇರಿ ಚಿಕ್ಕಪ್ಪನ ಮಗ ಪ್ರಶಾಂತ್ ಕೂಡ ತೆರಳಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ಅವಘಡ ನಡೆದು ಹೋಗಿದೆ. ಈ ಬೆಂಕಿ ಅನಾಹುತದಲ್ಲಿ 30 ವರ್ಷದ ರಮೇಶ್ ಮತ್ತು ಕಾವೇರಿ ಬಡಿಗೇರ್ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ.

ಮೂಲತಃ ಗದಗ ಮತ್ತು ಹುನಗುಂದ ಮೂಲದ ಈ ಇಬ್ಬರು ಒಂದು ವಾರದಿಂದ ಇದೇ ಲಾಡ್ಜ್ ನಲ್ಲಿ ವಾಸ ಇದ್ರಂತೆ. ಆದರೆ ಇಬ್ಬರಿಗೂ ಜಗಳ ಆಗಿದೆ. ಮಧ್ಯಾಹ್ನ ಹೊರಗಡೆ ಹೋಗಿದ್ದ ರಮೇಶ್ ವಾಪಸ್ ಹೋಗಬೇಕಾದ್ರೆ ಪೆಟ್ರೋಲ್ ತುಂಬಿದ ಬಾಟಲ್ ಹಿಡಿದು ಹೋಗಿದ್ದಾನೆ. ಬಳಿಕ ರೂಮಿನಲ್ಲಿ ಜಗಳ ನಡೆದು ಕಾವೇರಿ ಹೆದರಿಸಲು ಹೋಗಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.

ಆದರೆ ಕಾವೇರಿ ರೂಮಿನ ಬಾತ್ ರೂಂಗೆ ಹೋಗಿ ಲಾಕ್ ಮಾಡಿಕೊಂಡ ತಾನು ಕೆಲಸ ಮಾಡ್ತಿದ್ದ ಸಮೀಪದ ಸ್ಪಾ ಓನರ್ ಗೆ ಫೋನ್ ಮಾಡಿದ್ಲು. ಅಷ್ಟೊತ್ತಿಗಾಗಲೇ ಬೆಂಕಿಯಿಂದಾಗಿ ಹೊಗೆಯೆಲ್ಲ ಇಡೀ ಲಾಡ್ಜ್ ಗೆ ವ್ಯಾಪಿಸಿದೆ. ಇದ್ರಿಂದ ಗಾಬರಿಯಾದ ಲಾಡ್ಜ್ ಮಾಲೀಕ‌ ತಕ್ಷಣ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಬಿಲ್ಡಿಂಗ್ ಗ್ಲಾಸ್ ಹೊಡೆದು ರೂಂ ಒಳಗಡೆ ಹೋಗಿದ್ರು. ಆದರೆ ರಮೇಶ್ ಸುಟ್ಟು ಕರಕಲಾಗಿದ್ರೆ, ಕಾವೇರಿ ಉಸಿರುಗಟ್ಟಿ ಸಾವನ್ನಪ್ಪಿದ್ಲು. ಪ್ರತ್ಯಕ್ಷ ದರ್ಶಿ ಪ್ರಶಾಂತ್ ಹೇಳಿಕೆ ಬೆನ್ನಲ್ಲೇ ಅಸಲಿ ಕಹಾನಿ ತನಿಖೆ ವೇಳೆ ರಿವೀಲ್ ಆಗಿದೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು