ಉಜಿರೆ: SDM Hospital ನಲ್ಲಿ ENT surgeon ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ರೋಹನ್ ದೀಕ್ಷಿತ್ MBBS, MS ENT (Fellowship in head and neck oncosurgery), ರವರು 12-10-2025 ರಂದು ರೋಟರಿ ಕ್ಲಬ್ ಬೆಳ್ತಂಗಡಿಯ ಸದಸ್ಯರಾಗಿ ಸೇರಿದರು.

ಮುಂದಿನ ವರ್ಷದ ಅಸಿಸ್ಟೆಂಟ್ ಗವರ್ನರ್ ರೋ. ಡಾ. ಶಶಿಧರ್ ಡೋಂಗ್ರೆಯವರು ಈ ಪದಗ್ರಹಣ ಕಾರ್ಯಕ್ರಮ ನಿರ್ವಹಿಸಿ ಶುಭ ಹಾರೈಸಿದರು.

ಕೋಶಾಧಿಕಾರಿ ರೋ ನಾರಾಯಣ ಪೈಯವರು, ತಮ್ಮ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಭವ್ಯ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಪ್ರಾರಂಭದಲ್ಲಿ, ಆ್ಯನ್ ಗೀತಾ ಪ್ರಕಾಶ ಪ್ರಭುರವರು ಪ್ರಾರ್ಥನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರೋ. ಪ್ರೊ.ಪ್ರಕಾಶ ಪ್ರಭುಗಳು ಸ್ವಾಗತ ಮಾಡಿದರು. SDM Hospital ನ ಚೀಫ್ ಮೆಡಿಕಲ್ ಆಫೀಸರ್ ಡಾ ಸಾತ್ವಿಕರವರು ಡಾ.ರೋಹನ್ ದೀಕ್ಷಿತ್ ರನ್ನು ಸಭೆಗೆ ಪರಿಚಯಿಸಿದರು.

ಡಾ.ರೋಹನ್ ರವರು ತಮಗೆ ಇಂತಹ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ಸದಸ್ಯತ್ವವನ್ನು ನೀಡಿದುದಕ್ಕಾಗಿ ಧನ್ಯವಾದ ಸಲ್ಲಿಸಿದರು. ಕೊನೆಯಲ್ಲಿ ಡಾ. ಎಂ.ಎಂ ದಯಾಕರ ಧನ್ಯವಾದ ಸಮರ್ಪಣೆ ಕಾರ್ಯಕ್ರಮ ನಿರ್ವಹಿಸಿದರು. ರೋಟರಿ ಹಿರಿಯ ಸದಸ್ಯರಾದ ಪುಂಡಲೀಕ ಭಟ್, ಡಾ. ನಿಖಿತ, ರೋಟರಿ ಸದಸ್ಯರು, ಆ್ಯನ್ಸಗಳು, ಆ್ಯನೆಟ್ಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಡಾ. ಅಂಕಿತಾ ಭಟ್, ಗೀತಾ ಪ್ರಭು,ಲಿಲ್ಲಿ ಆ್ಯಂಟೋನಿ,ಸುಜಾತ ಅಣ್ಣಿ ಪೂಜಾರಿ, ವೀಣಾ ಮಯ್ಯ, ಡಾ ಶ್ರೀಹರಿ ಮತ್ತು ಪ್ರೊ. ಪ್ರಕಾಶ ಪ್ರಭು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

