ಧರ್ಮಸ್ಥಳ (ಅ.14) : ನವದ್ವನಿ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವೆಬ್‌ಸೈಟ್ ಉದ್ಘಾಟನೆ ಯನ್ನು ಇಂದು ಶ್ರೀ ಕ್ಷೇತ್ರದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆ ಯವರು ನೇರವೇರಿಸಿದರು.

ಸಪ್ಟೆಂಬರ್ 11 ರಂದು ಭಾರತ ಸರಕಾರದ ಕಂಪೆನಿಸ್ ಆಕ್ಟ್ ನಲ್ಲಿ ಮಾನ್ಯತೆ ಪಡೆದು ಪ್ರಾರಂಭ ಗೊಂಡ ಸಂಸ್ಥೆ ಇದಾಗಲೇ ದಾವಣಗೆರೆ ಮತ್ತು ಬೆಳ್ತಂಗಡಿಯಲ್ಲಿ ಶಾಖೆ ಹೊಂದಿದೆ.
ಈ ಸಂಸ್ಥೆಯ ಉದ್ದೇಶ – ಆರ್ಥಿಕ, ಕಾನೂನು, ಲೈಸನ್ಸಿಂಗ್ ಮತ್ತು ಆಡಳಿತ ಸಲಹೆಗಳನ್ನು ಒಂದೇ ವೇದಿಕೆಯ ಮೇಲೆ ಒದಗಿಸುವುದು. ನವದ್ವನಿ ಕನ್ಸಲಿಂಗ್ ಗ್ರಾಹಕರಿಗೆ ಪಾರದರ್ಶಕತೆ, ನೈತಿಕತೆ ಮತ್ತು ತಂತ್ರಜ್ಞಾನ ಆಧಾರಿತ ಸೇವೆ ನೀಡುವ ನಂಬಿಕಾರ್ಹ ಸಂಸ್ಥೆಗಳಲ್ಲಿ ಒಂದಗಬೇಕೆಂಬ ಆಶಯ ದೊಂದಿಗೆ ಸಂಸ್ಥೆಯನ್ನು ಪ್ರಾರಂಬಿಸಲಾಗಿದೆ.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಡೆ ಅವರು ಆಶೀರ್ವದಿಶಿ ಈ ಸಂಸ್ಥೆ ಸಮಾಜದ ವಿಶ್ವಾಸ ಗೆಲ್ಲುವ ನೈತಿಕ ಸಂಸ್ಥೆಯಾಗಿ ಹಾಗೂ ಭಾರತ ದೇಶದ ಪ್ರಗತಿಯಲ್ಲಿ ಪಾಲ್ಗೊಂಡು ಮಾದರಿಯಾಗಿ ಬೆಳೆಯಲಿ ಎಂದು ಶುಭಹಾರೈಸಿದರು.
ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ವಿನಯ ಕುಮಾರ್ ಪಿ. ಎಸ್. ಮಾತನಾಡಿ – “ನವದ್ವನಿ ಕನ್ಸಲ್ಟಿಂಗ್ ನೈತಿಕತೆ, ಪಾರದರ್ಶಕತೆ ಮತ್ತು ತಂತ್ರಜ್ಞಾನ ಎಂಬ ಮೌಲ್ಯಗಳ ಮೇಲೆ ನಿರ್ಮಿತ. ನಮ್ಮ ಗುರಿ – ಮುಂದಿನ 5 ವರ್ಷಗಳಲ್ಲಿ 1000 ಕೋಟಿ ಟರ್ನ್‌ಓವರ್‌ನ ಕಂಪೆನಿಗಳಲ್ಲಿ ಸಾಲಿನಲ್ಲಿ ಇದ್ದು ದೇಶದ ನವೋದ್ಯಮ ಪ್ರಗತಿಯಲ್ಲಿ ಜೊತೆಯಾಗುತ್ತೇವೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂಸ್ಥೆ ಭಾರತ ಸರಕಾರದ ಸ್ಟಾರ್ಟ್ ಅಪ್ ಡಿಜಿಟಲ್ ಇಂಡಿಯ ಮತ್ತು ಆತ್ಮನಿರ್ಬರ್ ಭಾರತದ ದೃಷ್ಟಿಯಿಂದ ಪ್ರೇರಣೆ ಪಡೆದು, ವ್ಯವಹಾರ ಮತ್ತು ಆಡಳಿತ ಪ್ರಕ್ರಿಯೆಗಳನ್ನು ಸರಳಗೊಳಿಸಲು ಬದ್ಧವಾಗಿದೆ.

ಚಾರ್ಟಡ್ ಅಕೌಂಟೆಂಟ್ ಮತ್ತು ಕಂಪೆನಿ ಸೇಕ್ರೆಟರಿ ಯಾದ ಗಾಯತ್ರಿ ರಾವ್ ಮಾತನಾಡಿ: “ಆರ್ಥಿಕ ಶಿಸ್ತು ಮತ್ತು ಜ್ಞಾನವು ಪ್ರತಿಯೊಂದು ಸಂಸ್ಥೆಯ ಹೃದಯ. ಮಹಿಳೆಯರು ಮತ್ತು ಯುವಜನರಿಗೆ ಹಣಕಾಸು ಅರಿವು ಮೂಡಿಸಲು ಹಾಗೂ ಸುಲಲಿತ ವ್ಯವಹಾರ ಮಾಡುವ ಉದ್ದೇಶದಿಂದ ಕಾನೂನು ಪ್ರಕ್ರಿಯೆ ಗಳ ಮಾಹಿತಿ ಒದಗಿಸಲು ನಾವು ಬದ್ಧವಾಗಿದ್ದೇವೆ.”
ಇದನ್ನು ಓದಿ : ದೀಪಾವಳಿ ಹಬ್ಬದ ವಿಶೇಷ : ನೈಋತ್ಯ ರೈಲ್ವೆಯಿಂದ ಹೆಚ್ಚುವರಿ ರೈಲುಗಳ ಸಂಪೂರ್ಣ ವೇಳಾಪಟ್ಟಿ ಬಿಡುಗಡೆ
ಡೈರೆಕ್ಟರ್ ಗಳಾದ ಶ್ರೀಮತಿ ನಾಗ ನಂದಿನಿ ಪಿ. ಏನ್, ಶ್ರೀಮತಿ ಚೈತ್ರ ಟಿ, ಶ್ರೀ ಆದಿತ್ಯ.ಎಸ್. ರಾವ್, ಶ್ರೀ ಚೇತನ್ ಜಿ. ಎಮ್ ಉಪಸ್ಥಿತರಿದ್ದರು.
